Wednesday, February 1, 2023

Latest Posts

ಹಾಲು ಮಾರುವುದಕ್ಕೆ ಹಾರ್ಲೆ ಬೈಕ್‌: ಮಿಲ್ಕ್‌ಮ್ಯಾನ್‌ ಕಂಡು ದಂಗಾದ ನೆಟ್ಟಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಪ್ರತಿನಿತ್ಯ ಮನೆಗೆ ಹಾಲು ಮಾರಲು ಬರುವ ವ್ಯಕ್ತಿ ನಡೆದುಕೊಂಡು ಬರುತ್ತಾನೆ ಇಲ್ಲವೇ ಸೈಕಲ್ ನಲ್ಲಿ ಬರುವುದು ನಾವು ಕಂಡಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸ್ಕೂಟರ್ ಬಳಕೆ ಮಾಡುವುದು ನೋಡಿದ್ದೇವೆ. ಆದರೆ ಇಲ್ಲಿ ಹಾಲು ಮಾರುತ್ತಿರುವುದು ʼಹಾರ್ಲೆ ಮಿಲ್ಕ್‌ಮ್ಯಾನ್‌ʼ.

ಅಂದ ಹಾಗೆ, ಪ್ರಸಿದ್ಧ ಮೋಟಾರು ಸೈಕಲ್‌ ಸಂಸ್ಥೆಯಾಗಿರುವ ಹಾರ್ಲೆ ಡೇವಿಡ್‌ಸನ್ ಬೈಕ್‌ನಲ್ಲಿ ವ್ಯಕ್ತಿಯೊಬ್ಬ ಹಾಲು ಮಾರಾಟ ಮಾಡುತ್ತಿದ್ದಾನೆ. ಅದರ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹರಿಬಿಡಲಾಗಿದೆ. ಹಾರ್ಲೆ ಡೇವಿಡ್‌ಸನ್‌ ಬೈಕಿನ ಅಕ್ಕಪಕ್ಕ ಎರಡು ಹಾಲಿನ ಕ್ಯಾನ್‌ ಕಟ್ಟಿಕೊಂಡಿರುವ ವ್ಯಕ್ತಿ ಮನೆ ಮನೆಗೆ ಹಾಲು ಹಾಕುತ್ತ ತೆರಳುವ ವಿಡಿಯೋ ಅದಾಗಿದೆ.

ಈ ವಿಡಿಯೊವನ್ನು ಅಮಿತ್‌ ಭಂದನ್‌ ಹೆಸರಿನವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಡಿ.18ರಂದು ಹೊರಬಿಡಲಾದ ಈ ವಿಡಿಯೋ ಈಗಾಗಲೇ 30 ಲಕ್ಷದಷ್ಟು ವೀಕ್ಷಣೆ ಪಡೆದುಕೊಂಡಿದೆ. ಸಾವಿರಾರು ಮಂದಿ ವಿಡಿಯೊಗೆ ಕಾಮೆಂಟ್‌ಗಳನ್ನು ಹಾಕಿದ್ದಾರೆ.

‘ನನ್ನ ಬಿಸಿನೆಸ್‌ ಮುಂದುವರಿಸುತ್ತೇನೆ, ನಿನಗೆ ಹಾರ್ಲೆ ಬೈಕ್‌ ಕೊಡಿಸುತ್ತೇನೆ ಎಂದು ಅಪ್ಪ ಹೇಳಿದರೆ ಹೀಗೆ ಆಗುತ್ತದೆ’, ‘ಇದೇ ಕಾರಣಕ್ಕೆ ಹಾರ್ಲೆ ಸಂಸ್ಥೆ ಭಾರತವನ್ನು ಬಿಟ್ಟು ಹೋಯಿತು’, ‘ಇವರು ಬರೀ ಮಿಲ್ಕ್‌ಮ್ಯಾನ್‌ ಅಲ್ಲ ಹಾರ್ಲೆ ಮಿಲ್ಕ್‌ಮ್ಯಾನ್‌’ ಹೀಗೆ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.

ಹಾರ್ಲೆ ಡೇವಿಡ್‌ಸನ್ ಬೈಕುಗಳ ಬೆಲೆ ಅಂದಾಜು 12 ಲಕ್ಷ ರೂ.ನಿಂದ 40 ಲಕ್ಷ ರೂ.ವರೆಗೂ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!