ಹಿಂದೂಗಳ ಬಗ್ಗೆ ದುರಂಹಕಾರದಿಂದ ಮಾತನಾಡಿದರೆ ಸಹಿಸಲಾಗದು: ಚರಂತಿಮಠ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬಾಗಲಕೋಟೆ:
ಕಾಂಗ್ರೆಸ್ ನಾಯಕ ಸತೀಶ ಜಾರಕಿಹೋಳಿ ಯವರು ʼಹಿಂದು ಪದ ಅಶ್ಲೀಲʼ ಎಂದು ನೀಡಿದ ಹೇಳಿಕೆ ಖಂಡಿಸಿ ನಗರದಲ್ಲಿ ಬಿಜೆಪಿಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಶಿವಾನಂದ ಜಿನ್ ಆವರಣದಿಂದ‌ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತದವರೆಗೆ ತಲುಪಿ ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ, ಹಿಂದೂ ಪದದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಜಾರಕಿಹೊಳಿಯವರು ಭಾರತೀಯರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರಲ್ಲದೆ, ಹಿಂದೂ ಪದದ ಕುರಿತು ಮಾತನಾಡಿರುವುದನ್ನು ಉಗ್ರವಾಗಿ ಖಂಡಿಸಿದರು.
ಭಾರತೀಯರ ಕ್ಷಮೆಯನ್ನು ಜಾರಕಿಹೊಳಿ ಕೇಳದಿದ್ದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ. ಯಾವ ರಾಜಕಾರಣಿಗಳು ಇಷ್ಟೊಂದು‌ ದುರಂಹಕಾರದಿಂದ ಮಾತನಾಡಬಾರದು ಎಂದು ಖಂಡಿಸಿದರು.
ಹಿಂದೂಗಳು ಇರುವುದರಿಂದಲೇ ಇದು ಹಿಂದೂಸ್ತಾನವಾಗಿದೆ. ಹಿಂದೂ ಪದ‌ ಅವಹೇಳನ ಮಾಡುವವರು ಬೇಕಿದ್ದರೆ ಮತಾಂತರವಾಗಿ ಹೋಗಿ ಎಂದು ಕಿಡಿಕಾರಿದರು. 130 ಕೋಟಿ ಜನರ ಭಾವನೆಗೆ ಅನ್ಯಾಯವಾಗುವ ರೀತಿ ಮಾತನಾಡಿದ್ದನ್ನು ಅವರು ಖಂಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಬಿಟಿಡಿಎ ಮಾಜಿ ಅಧ್ಯಕ್ಷ ಜಿ, ಏನ್ ಪಾಟೀಲ್, ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ಬೋಡಾ ಮಾಜಿ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ,ನಗರಸಭೆ ಸಭಾಪತಿ ಅಂಬಾಜಿ ಜೋಷಿ,ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ. ಉಪಾಧ್ಯಕ್ಷ ಬಸವರಾಜ ಅವರಾದಿ, ಬಿಟಿಡಿಎ ಸದಸ್ಯ ಶಿವಾನಂದ ಟವಳಿ, ನಗರಸಭೆ ಸದಸ್ಯರಾದ ಶಶಿಕಲಾ ಮಜ್ಜಗಿ, ಶೋಭಾ ರಾವ್, ಬಸು ಹುನಗುಂದ, ಉಮೇಶ ಹಂಚಿನಾಳ, ಅಯ್ಯಪ್ಪ ವಾಲ್ಮೀಕಿ,ಜಿಲ್ಲಾ ವಕ್ತಾರಾದ ಸತ್ಯನಾರಾಯಣ ಹೇಮಾದ್ರಿ, ರಾಜು ಗಾಣಿಗೇರ ಸೇರಿದಂತೆ ಬಿಜೆಪಿ ಪಕ್ಷದ ಹಿರಿಯರು ಕಾರ್ಯಕರ್ತರು ಹೆಚ್ಚಿನ ಸಂಖ್ಯಾಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!