ಯಶ್ ನಿರಾಕರಿಸಿದ ಬಾಲಿವುಡ್ ಸಿನಿಮಾಗೆ ವಿಜಯ್ ದೇವರಕೊಂಡ ಹೀರೋ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಲೆಹಾಕಿದ ‘ಬ್ರಹ್ಮಾಸ್ತ್ರ-1 ಶಿವ’ದ ಸೀಕ್ವೆಲ್‌ನ ಶೂಟಿಂಗ್ ಆರಂಭವಾಗಬೇಕಿದೆ. ಮುಖ್ಯ ಭೂಮಿಕೆಯಲ್ಲಿ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ನಟಿಸಿದ್ದು, ಇದೀಗ ಪಾರ್ಟ್-2 ಗಾಗಿ ಬೇರೆ ನಾಯಕರ ಹುಡುಕಾಟದಲ್ಲಿದೆ ಚಿತ್ರತಂಡ.

ಈ ಆಫರ್‌ನ್ನು ಮೊದಲು ರಾಕಿಂಗ್ ಸ್ಟಾರ್ ಯಶ್‌ಗೆ ನೀಡಲಾಗಿತ್ತು. ಯಶ್ ಸಿನಿಮಾ ರಿಜೆಕ್ಟ್ ಮಾಡಿದ ಬಳಿಕ ಈ ಆಫರ್ ವಿಜಯ್ ದೇವರಕೊಂಡಗೆ ಹೋಗಿದೆ ಎನ್ನಲಾಗಿದೆ.

ಕೆಜಿಎಫ್‌ನಂಥ ಸಿನಿಮಾ ಮಾಡಿ ಸ್ಟಾಂಡರ್ಡ್ ಸೆಟ್ ಮಾಡಿರುವಾಗ ಮತ್ತೆ ಸಿನಿಮಾ ಆರಿಸುವಾಗ ಆಲೋಚಿಸಬೇಕು ಎಂದು ಯಶ್ ಹೇಳಿ ಹಿಂದೆ ಸರಿದಿದ್ದಾರೆ. ಈ ಚಾನ್ಸ್ ಇದೀಗ ವಿಜಯ್ ಕೈ ಸೇರಿದ್ದು, ಪಾತ್ರಕ್ಕೆ ವಿಜಯ್ ಹೊಂದುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ವಿಜಯ್ ಈ ಆಫರ್ ಒಪ್ಪಿದ್ದಾರಾ ಕಾದುನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!