ರಾಸಾಯನಿಕ ಟ್ಯಾಂಕರ್ ಸ್ಫೋಟ: 2 ಸಾವು, ಇಬ್ಬರ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹರಿಯಾಣದ ಪಾಣಿಪತ್‌ನ ಸದರ್ ಪ್ರದೇಶ ರಿಫೈನರಿ ಬಳಿಯ ಕೊಕೊ ಚೌಕ್ ನಲ್ಲಿ ಶನಿವಾರ ರಾಸಾಯನಿಕ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸದರ್‌ನ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಪ್ರಕಾರ, ಇಬ್ಬರು ಗಾಯಗೊಂಡ ವ್ಯಕ್ತಿಗಳು ಹತ್ತಿರದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಅಂಗಡಿಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದೆ.

ವೆಲ್ಡಿಂಗ್ ಕೆಲಸದ ವೇಳೆ ಈ ಘಟನೆ ನಡೆದಿದೆ. ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮನಾಥ್ ವೆಲ್ಡಿಂಗ್ ಆರಂಭಿಸಿದ ತಕ್ಷಣ ಬೆಂಕಿ ಕಿಡಿಯಿಂದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮೃತರನ್ನು ಉತ್ತರ ಪ್ರದೇಶದ ಘಟಂಪುರದ ಜುನೈದ್ (ಚಾಲಕ) ಮತ್ತು ಪಾಣಿಪತ್‌ನ ಗೋಪಾಲ್ ಕಾಲೋನಿಯ ಪಪ್ಪು (ಎಲೆಕ್ಟ್ರಿಷಿಯನ್) ಎಂದು ಎಸ್‌ಎಚ್‌ಒ ರಾಮನಿವಾಸ್ ಗುರುತಿಸಿದ್ದಾರೆ. ಏತನ್ಮಧ್ಯೆ, ಯುಪಿಯ ಖಟ್ಮಲ್‌ಪುರದ ಮೊಹಮ್ಮದ್ ಹುಸೇನ್ ಮತ್ತು ಸೋಮನಾಥ್ ಎಂಬ ವ್ಯಕ್ತಿ ಗಾಯಗೊಂಡಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!