RECIPE | ಭಾನುವಾರದ ವಿಶೇಷ ಕೆಎಫ್‌ಸಿ ರುಚಿಯ ಕ್ರಿಸ್ಪಿ ಚಿಕನ್‌ ಫ್ರೈ ಮನೆಯಲ್ಲೇ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭಾನುವಾರದಂದು ವಿಶೇಷವಾಗಿ ಏನಾದ್ರು ತಿನ್ನಬೇಕು ಅಂತ ಯೋಚಿಸ್ತಿದೀರಾ ? ಅದಕ್ಕಾಗಿ ಹೊರಗಡೆ ಹೊರಡೋಕೆ ಪ್ಲಾನ್‌ ಹಾಕ್ತಿದೀರಾ ? ಹಾಗಾದ್ರೆ ಮನೆಯಲ್ಲೇ ಕೆಎಫ್‌ಸಿ ಶೈಲಿಯ ಕ್ರಿಸ್ಪಿ ಚಿಕನ್‌ ಫ್ರೈ ಟ್ರೈ ಮಾಡಿ ಮತ್ತು ಮನೆಯವರೊಂದಿಗೆ ಸವಿಯಿರಿ.

ಬೇಕಾಗುವ ಸಾಮಗ್ರಿಗಳು :

* ಚಿಕನ್‌ ಡ್ರಮ್‌ಸ್ಟಿಕ್/ಬ್ರೆಸ್ಟ್‌ ಪೀಸ್
* ಮೊಸರು
* ಮೊಟ್ಟೆ
* ಮೈದಾ
* ಬ್ರೆಡ್‌ ಚೂರುಗಳು
* ಖಾರದ ಪುಡಿ
* ಬಿಳಿ ಕಾಳು ಮೆಣಸಿನ ಪುಡಿ
* ತುಳಸಿ (ಒಣಗಿಸಿದ್ದು)
* ಒರೆಗ್ನೋ
* ಹಸಿ ಮೆಣಸಿನಕಾಯಿ
* ಬೆಳ್ಳುಳ್ಳಿ
* ಶುಂಠಿ (ಪುಡಿ)
* ಉಪ್ಪು
* ಎಣ್ಣೆ

ಮಾಡುವ ವಿಧಾನ :

* ಮೊದಲು ಚಿಕನ್‌ ಅನ್ನು ತೊಳೆಯಿರಿ.
* ಈಗ ಮೊಟ್ಟೆ, ಮೊಸರು, ಖಾರ ಪುಡಿ, ಉಪ್ಪು ಹಾಕಿ ನಂತರ ಚಿಕನ್ ಹಾಕಿ ಮಿಕ್ಸ್‌ ಮಾಡಿ ಇಡಿ
* ಸ್ವಲ್ಪ ಸಮಯದ ನಂತರ ಮೈದಾ, ಹಸಿ ಮೆಣಸಿನ ಕಾಯಿ, ಬಿಳಿ ಕಾಳು ಮೆಣಸಿನ ಪುಡಿ, ಒರೆಗ್ನೋ, ಬೆಳ್ಳುಳ್ಳಿ ಪುಡಿ, ಶುಂಠಿ ಪುಡಿ, ಒಣ ತುಳಸಿ, ಉಳಿದ ಖಾರ ಮೆಣಸಿನ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ.
* ಈಗ ಮೈದಾ ಮಿಕ್ಸ್‌ ಮಾಡಿಟ್ಟ ಮಿಶ್ರಣವನ್ನು ಚಿಕನ್‌ಗೆ ಮೆತ್ತಿ,ನಂತರ ಅದನ್ನು ಬ್ರೆಡ್‌ ಚೂರ್‌ನಲ್ಲಿ ಹೊರಳಾಡಿಸಿ.
* ಈಗ ದಪ್ಪ ತಳವಿರುವ ಕಡಾಯಿಯಲ್ಲಿ ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಕುದಿ ಬಂದಾಗ ಚಿಕನ್‌ ಹಾಕಿ ಫ್ರೈ ಮಾಡಿ, ಬೆಂದ ಮೇಲೆ ತೆಗೆಯಿರಿ. ಈಗ ಬಿಸಿಬಿಸಿಯಾದ ಕೆಎಫ್‌ಸಿ ರುಚಿಯ ಕ್ರಿಸ್ಪಿ ಚಿಕನ್‌ ಫ್ರೈ ಸವಿಯಲು ಸಿದ್ಧ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!