5ಜಿ ತರಂಗಾಂತರ ಹರಾಜು ಅದಾನಿ-ಅಂಬಾನಿ ನಡುವೆ ಶುರುವಾಯ್ತೇ ಪೈಪೋಟಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದಂತೆ ಜುಲೈ 26ರಂದು ಭಾರತದಲ್ಲಿ 5ಜಿ ತರಗಾಂತರ ಹರಾಜು ನಡೆಯಲಿದ್ದು, 5ಜಿ ಸೇವೆ 4ಜಿ ಗಿಂತಲೂ 10 ಪಟ್ಟು ವೇಗವಿರಲಿದೆ.

ಜಿಯೋ ಮುಖೇಶ್ ಅಂಬಾನಿಯವರ ಕಂಪನಿ, ಸುನಿಲ್ ಭಾರ್ತಿ ಮಿತ್ತಲ್ ಒಡೆತನದ ಏರ್‌ಟೆಲ್ ಏತನ್ಮಧ್ಯೆ, ನಾಲ್ಕನೇ ಅರ್ಜಿದಾರರಾದ ಅದಾನಿ ಗ್ರೂಪ್ ಈ ಹರಾಜಿನಲ್ಲಿ ಭಾಗವಹಿಸಲಿದ್ದು, ಅದಾನಿ ಮತ್ತು ಅಂಬಾನಿ ನಡುವಿನ ಪೈಪೋಟಿಯೂ ನಡೆಯಲಿದೆ.

ಅಲ್ಲದೆ, ವೊಡಾಫೋನ್ ಐಡಿಯಾ ಕೂಡಾ ಭಾಗವಹಿಸಲಿದೆ. 20 ವರ್ಷಗಳ ಮಾನ್ಯತೆಯ ಅವಧಿಯೊಂದಿಗೆ ಒಟ್ಟು 72 ಜಿಹೆಚ್‌ಝಡ್ ಸ್ಪೆಕ್ಟ್ರಮ್ ಈ ವರ್ಷದ ಜುಲೈ ಅಂತ್ಯದ ವೇಳೆಗೆ ಹರಾಜಿಗೆ ಇಡಲಾಗುತ್ತದೆ. ಆವರ್ತಗಳಲ್ಲಿ ಸ್ಪೆಕ್ಟ್ರಮ್‌ಗಾಗಿ ಹರಾಜು ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!