Wednesday, February 8, 2023

Latest Posts

ಹ್ಯಾಟ್ರಿಕ್ ನೋಬಾಲ್, ಒಂದೇ ಎಸೆತದಲ್ಲಿ 14 ರನ್ ಕೊಟ್ಟ ಅರ್ಷದೀಪ್: ಇದೂ ಒಂದು ರೀತಿ ವಿಶ್ವದಾಖಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೇಗದ ಬೌಲರ್ ಅರ್ಷದೀಪ್ ಸಿಂಗ್ ತಮ್ಮ ಮೊದಲ ಪಂದ್ಯದ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್ ದಾಖಲೆ ಮಾಡಿದ್ದಾರೆ. ಹೌದು, ಪುಣೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟಿ೨೦ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಮರಳಿದ್ದ ಅರ್ಷದೀಪ್ ಹ್ಯಾಟ್ರಿಕ್ ಬರೆದಿದ್ದು, ವಿಕೆಟ್ ಪಡೆದು ಅಲ್ಲ, ನೋಬಾಲ್ ಎಸೆಯುವುದರಲ್ಲಿ.

ಎರಡನೇ ಓವರ್ ಎಸೆಯುವ ಜವಾಬ್ದಾರಿ ಹೊತ್ತಿದ್ದ ಅರ್ಷದೀಪ್, ಬೇಡದ ವಿಶ್ವದಾಖಲೆ ಬರೆದಿದ್ದಾರೆ. ಹ್ಯಾಟ್ರಿಕ್ ನೋ ಬಾಲ್ ಎಸೆದಿದ್ದಾರೆ. ಸತತ ಮೂರು ನೋಬಾಲ್ ನೀಡಿ, ಒಂದೇ ಎಸೆತದಲ್ಲಿ 12 ರನ್ ಗಳಿಸುವಂತೆ ಮಾಡಿದ್ದಾರೆ.

ಅನಾರೋಗ್ಯದ ಕಾರಣದಿಂದ ತಿಂಗಳಿನಿಂದ ರೆಸ್ಟ್‌ನಲ್ಲಿದ್ದ ಅರ್ಷದೀಪ್ ಈಗಷ್ಟೇ ತಂಡಕ್ಕೆ ಮರಳಿದ್ದು, ಫೀಲ್ಡ್‌ನಲ್ಲಿ ಟಚ್ ಕಳೆದುಕೊಂಡ ಅರ್ಷದೀಪ್ ಸತತ ಮೂರು ನೋಬಾಲ್ ಎಸೆದಿದ್ದಾರೆ. ಇದಕ್ಕೆ ಬ್ಯಾಟರ್ ಕುಸಾಲ್ ಮೆಂಡಿಸ್ ಒಂದು ಸಿಕ್ಸ್ ಹಾಗೂ ಒಂದು ಬೌಂಡರಿ ಬಾರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!