ದೂರದರ್ಶನ, ಪ್ರಸಾರಭಾರತಿ ತಂತ್ರಜ್ಞಾನ ಅಭಿವೃದ್ಧಿ-2,539 ಕೋಟಿ ರೂ. ಅನುಮೋದಿಸಿದೆ ಕೇಂದ್ರ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೂರದರ್ಶನ, ಆಲ್‌ ಇಂಡಿಯಾ ರೇಡಿಯೋಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ 2,539 ಕೋಟಿ ರೂಪಾಯಿಗಳ ಅನುಮೋದನೆ ನೀಡಿದೆ. ‘ಬ್ರಾಡ್‌ಕಾಸ್ಟಿಂಗ್ ಇನ್ಫ್ರಾಸ್ಟ್ರಕ್ಚರ್ ಮತ್ತು ನೆಟ್‌ವರ್ಕ್ ಡೆವಲಪ್‌ಮೆಂಟ್ʼ ಎಂಬ ಯೋಜನೆಯನ್ನು ಜಾರಿಗೆ ತರಲು ಯೋಚಿಸಲಾಗಿದ್ದು ಈ ಯೋಜನೆಯ ಅಡಿಯಲ್ಲಿ ಪ್ರಸಾರ ಭಾರತಿ ಸೇವೆಗಳು ಅಂದರೆ ಆಲ್‌ ಇಂಡಿಯಾ ರೇಡಿಯೋ, ದೂರದರ್ಶನಗಳಲ್ಲಿ ಮೂಲ ಸೌಕರ್ಯಾಭಿವೃದ್ಧಿಯಾಗಲಿದೆ.

ಈ ಯೋಜನೆಯ ಅಡಿಯಲ್ಲಿ ಪ್ರೇಕ್ಷಕರಿಗೆ ಉತ್ತಮ ಸೇವೆಗಳನ್ನು ನೀಡುವುದರ ಜೊತೆಗೆ ಗುಣಮಟ್ಟದ ವಿಷಯವನ್ನು ಅಭಿವೃದ್ಧಿಪಡಿಸುವುದು ಮತ್ತು ಹೆಚ್ಚಿನ ಚಾನಲ್‌ಗಳಿಗೆ ಅವಕಾಶ ಕಲ್ಪಿಸಲು DTH ಪ್ಲಾಟ್‌ಫಾರ್ಮ್‌ನ ಸಾಮರ್ಥ್ಯವನ್ನು ನವೀಕರಿಸುವುದು ಮತ್ತು ವೀಕ್ಷಕರಿಗೆ ವೈವಿಧ್ಯಮಯ ವಿಷಯಗಳನ್ನು ತಲುಪಿಸಲು ಅಗತ್ಯ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಕೇಂದ್ರ ಪ್ರಸಾರ ಸಚಿವಾಲಯ ಹೇಳಿದೆ.

ಇದಕ್ಕಾಗಿ ಅಗತ್ಯ ತಂತ್ರಜ್ಞಾನ ಬೆಳವಣಿಗೆಗಳನ್ನೂ ಕೈಗೊಳ್ಳಲು ಯೋಜಿಸಲಾಗಿದೆ. OB ವ್ಯಾನ್‌ಗಳ ಖರೀದಿ ಮತ್ತು DD ಮತ್ತು AIR ಸ್ಟುಡಿಯೋಗಳನ್ನು HD ಸಿದ್ಧಗೊಳಿಸಲು ಡಿಜಿಟಲ್ ಅಪ್‌ಗ್ರೇಡೇಶನ್ ಮುಂತಾದ ಕೆಲಸಗಳು ನಡೆಯಲಿವೆ.

ಪ್ರಸ್ತುತ, ದೂರದರ್ಶನ 28 ಪ್ರಾದೇಶಿಕ ಚಾನೆಲ್‌ಗಳು ಸೇರಿದಂತೆ 36 ಟಿವಿ ಚಾನೆಲ್‌ಗಳನ್ನು ನಿರ್ವಹಿಸುತ್ತದೆ ಮತ್ತು ಆಲ್ ಇಂಡಿಯಾ ರೇಡಿಯೋ 500 ಕ್ಕೂ ಹೆಚ್ಚು ಪ್ರಸಾರ ಕೇಂದ್ರಗಳನ್ನು ನಿರ್ವಹಿಸುತ್ತದೆ. ಗಡಿ ಪ್ರದೇಶದಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿಯೂ ಪ್ರಸಾರವನ್ಅನು ಹೆಚ್ಚಿಸಲು ಅನುಕೂಲವಾಗಲು 8 ಲಕ್ಷಕ್ಕೂ ಅಧಿಕ ಸೆಟ್‌ಟಾಪ್‌ ಗಳನ್ನು ವಿತರಿಸಲೂ ಯೋಜನೆ ಹಾಕಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!