BABY CARE | ಮಕ್ಕಳಿಗಾಗಿ ಮನೆತುಂಬ ಆಟಿಕೆಗಳನ್ನು ಇಟ್ಟಿದ್ದೀರಾ? ಆಟಿಕೆ ಕಡಿಮೆ ಇದ್ದಷ್ಟು ಚಟುವಟಿಕೆ ಹೆಚ್ಚು.. ಹೇಗೆ ನೋಡಿ..

ನಮ್ಮ ಮಕ್ಕಳಿಗೆ ಯಾವ ಕೊರತೆಯೂ ಇರಬಾರದು, ಮಕ್ಕಳು ಬೆರಳು ತೋರಿಸಿದ್ದನ್ನೆಲ್ಲಾ ಕೊಡಿಸುವ ಪೋಷಕರು ನೀವಾ? ಹಾಗಿದ್ರೆ ಇದನ್ನು ಓದಲೇಬೇಕು.. ಮಕ್ಕಳ ಬಳಿ ಕಡಿಮೆ ಆಟಿಕೆ ಇದ್ದಷ್ಟು ಒಳ್ಳೆಯದು ಯಾಕೆ ನೋಡಿ..

When Do Babies Start Playing With Toys? A Guide for 0-12 Months

  • ಇರುವ ನಾಲ್ಕೇ ಆಟಿಕೆಗಳಲ್ಲಿ ವಿಭಿನ್ನವಾಗಿ, ಕ್ರಿಯಾತ್ಮಕವಾಗಿ ಆಟ ಆಡುವ ಅಭ್ಯಾಸ ಮಕ್ಕಳಿಗೆ ಬರುತ್ತದೆ.
  • ತುಂಬಾ ಆಟಿಕೆಗಳನ್ನು ಕೊಟ್ಟರೆ ಬೇಗ ವಿಚಲಿತರಾಗುತ್ತಾರೆ,ಎಲ್ಲ ಆಟಿಕೆಗಳನ್ನು ಮುಟ್ಟಿ ಎಸೆಯುತ್ತಾರೆ.
  • ಕೆಲವೇ ಆಟಿಕೆಗಳಿದ್ದರೆ ಅವುಗಳ ಮೇಲೆ ತಮ್ಮೆಲ್ಲಾ ಗಮನ ಹರಿಸುತ್ತಾರೆ. ತಮ್ಮ ಏಕಾಗ್ರತೆ ಈ ಆಟಿಕೆಗಳ ಮೇಲೇ ಇರುತ್ತದೆ.
  • ನಾಲ್ಕು ಆಟಿಕೆಗಳಿಗೆ ಮಕ್ಕಳು ನೀಡುವ ಸಮಯವನ್ನು 15 ಆಟಿಕೆಗಳಿಗೆ ನೀಡೋದಿಲ್ಲ, ಈ ನಾಲ್ಕು ಆಟಿಕೆಗಳ ಜತೆ 10 ನಿಮಿಷ ಆಟ ಆಡಿದ್ರೆ, 14 ಆಟಿಕೆ ಜತೆ ಎರಡು ನಿಮಿಷವೂ ಆಡೋದಿಲ್ಲ.
  • ಇರುವ ನಾಲ್ಕು ಗೊಂಬೆಗಳನ್ನು ಶುಚಿಯಾಗಿ ಇಟ್ಟುಕೊಳ್ಳೋದು, ಕಾಳಜಿ ವಹಿಸೋದು ಮಾಡುತ್ತಾರೆ.
  • ಕಡಿಮೆ ಗೊಂಬೆಗಳು ಇರುವಾಗ ಮೆಂಟಲ್ ಪ್ರೆಶರ್ ಕಡಿಮೆ ಇರುತ್ತದೆ. ಯಾವ ಆಟಿಕೆ ಜತೆ ಆಡಲಿ ಅನ್ನೋ ಟೆನ್‌ಶನ್ ಇರೋದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!