HEALTH| ಕಣ್ಣಿನ ಸುತ್ತ ಕಪ್ಪು ವರ್ತುಲವಿದೆಯೇ? ಹೀಗೆ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿದ್ದೆ, ಕೆಲಸದೊತ್ತಡದಿಂದ ಕಣ್ಣಿನ ಸುತ್ತ ಕಪ್ಪು ವರ್ತುಲವುಂಟಾಗಿದೆ ಎಂಬುದು ಒಂದು ಹಂತದಲ್ಲಿ ಸತ್ಯವಾದರೂ ಇದೇ ಅಂತಿಮವಲ್ಲ. ದೇಹದಲ್ಲಿ ಪೋಷಕಾಂಶಗಳ ಕೊರತೆಯುಂಟಾಗಿ ಇದು ಮೂಡುತ್ತವೆ. ಚರ್ಮದ ಹೊಳಪು ಹೆಚ್ಚಾಗಲು ವಿಟಮಿನ್‌ ಎ ಕಾರ್ಯನಿರ್ವಹಿಸುತ್ತದೆ. ಇದು ಆಂಟಿ ಏಜಿಂಗ್‌ ಆಗಿಯೂ ಕಾರ್ಯನಿರ್ವಹಿಸುತ್ತದೆ. ಚರ್ಮ ಸುಕ್ಕಾಗದಂತೆ, ಕಪ್ಪಾಗದಂತೆ ಇದು ಕೆಲಸಮಾಡುತ್ತದೆ. ಕೆಂಪು,ಹಸಿರು ಮತ್ತು ಹಳದಿ ಬಣ್ಣಗಳ ತಕಾರಿ ಹಣ್ಣು ಸೇವನೆಯಿಂದ ವಿಟಮಿನ್‌ ಎ ದೇಹಕ್ಕೆ ಲಭ್ಯವಾಗುತ್ತದೆ. ಪಾಲಕ್‌,ಹರಿವೆ, ಪಪ್ಪಾಯಿಗಳ ಸೇವನೆ ಉತ್ತಮ.

ವಿಟಮಿನ್‌ ಸಿ ಕೂಡಾ ಉತ್ತಮ ಪ್ರಮಾಣದಲ್ಲಿ ದೇಹಾರೋಗ್ಯ ಕಾಪಾಡಲು ಸಹಕಾರಿ. ದೇಹದಲ್ಲಿ ಕೊಲಾಜೆನ್‌ ಉತ್ಪತ್ತಿಗೆ ಪ್ರಚೋದಿಸಿ, ದೇಹದ ಎಲ್ಲಾ ಭಾಗಗಳಿಗೆ ರಕ್ತ ಆಮ್ಲಜನಕದ ಪೂರೈಕೆ ಸರಿಯಾಗುವಂತೆ ಮಾಡುತ್ತದೆ. ನೆಲ್ಲಿಕಾಯಿ, ನಿಂಬೆಯಂತಹ ಹಣ್ಣುಗಳ ಸೇವನೆಯಿಂದ ವಿಟಮಿನ್‌ ಸಿ ದೇಹಕ್ಕೆ ಲಭ್ಯವಾಗುತ್ತದೆ. ವಿಟಮಿನ್‌ ಇ ದೇಹಕ್ಕೆ ಅಗತ್ಯವಾದ ಇನ್ನೊಂದು ಜೀವಸತ್ವ. ಉರಿಯೂತ, ಚರ್ಮದ ಸುಕ್ಕು , ಕಪ್ಪುಕಲೆ ನಿವಾರಣೆಗೆ ಪ್ರಮುಖ ಪಾತ್ರವಹಿಸುತ್ತದೆ. ವಾಲ್‌ನಟ್‌ ಸೇರಿದಂತೆ ಬಗೆ ಬಗೆಯ ಬೀಜಗಳಿಂದ ಇದನ್ನು ಪಡೆಯಬಹುದಾಗಿದೆ.

ರಕ್ತಹೀನತೆಯಿಂದಲೂ ಕಣ್ಣಿನ ಸುತ್ತ ವರ್ತುಲವಾಗುತ್ತದೆ. ಹಿಮೋಗ್ಲೋಬಿನ್‌ ಕೊರತೆಯಾದ ತಕ್ಷಣ ಅನೇಕ ತೊಂದರೆಯಾಗುತ್ತವೆ. ಇದಕ್ಕೆ ಕಬ್ಬಿಣದಂಶ ಸೇವನೆ ಬಹುಮುಖ್ಯವಾಗುತ್ತದೆ. ಬೀಟ್‌ರೂಟ್‌, ಪಾಲಕ್‌, ಬೇಳೆಕಾಳುಗಳ ಸೇವನೆಯಿಂದ ದೇಹಕ್ಕೆ ಕಬ್ಬಿಣದ ಅಂಶ ಪೂರೈಕೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!