ಮಹಿಳೆಯರಿಗೆ ಟಿಕೆಟ್ ಫ್ರೀ, ಟೂರಿಸ್ಟ್ ಪ್ಲೇಸ್‌ಗಳಲ್ಲೆಲ್ಲಾ ಮಹಿಳಾ ಗುಂಪುಗಳದ್ದೇ ಹವಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ ಎಂದು ಘೋಷಿಸಿದ್ದೇ ತಡ, ಮಹಿಳೆಯರು ಟ್ರಾವೆಲಿಂಗ್ ಬಗ್ಗೆ ನೂತನ ಆಸಕ್ತಿ ತಾಳಿದ್ದಾರೆ.

ಈ ಬಗ್ಗೆ ಸಾಕಷ್ಟು ಟ್ರೋಲ್ಸ್ ಹಾಗೂ ಮೀಮ್ಸ್ ಕೂಡ ಆಗಿದ್ದು, ಹೆಂಡತಿಯರು ಮೂರು ದಿನಕ್ಕಾಗೋ ಅಷ್ಟು ಸಾಂಬಾರ್ ಮಾಡಿಟ್ಟು ಟ್ರಿಪ್ ಹೋಗ್ತಿದ್ದಾರೆ ಎಂದು ಗಂಡಸರು ಅಳಲು ತೋಡ್ಕೊಂಡಿದ್ದಾರೆ.

ಸಿದ್ದರಾಮಯ್ಯ ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಇಲಾಖೆಗೂ ಲಾಭ ಆಗಿದೆ, ಯೋಗ ಫ್ರೆಂಡ್ಸ್, ಏರಿಯಾ ಫ್ರೆಂಡ್ಸ್, ಆಫೀಸ್ ಫ್ರೆಂಡ್ಸ್ ಎಲ್ಲರೂ ವೀಕೆಂಡ್ ಬಂದಂತೆ ಟ್ರಿಪ್‌ಗಳಿಗೆ ತೆರಳುತ್ತಿದ್ದಾರೆ. ಇನ್ನು ಮಳೆಗಾಲ ಆರಂಭವಾಗುತ್ತಿದ್ದು, ಮಳೆಗಾಲದ ಟ್ರಾವೆಲಿಂಗ್‌ನ್ನು ಕೂಡ ಮಹಿಳೆಯರು ಎಂಜಾಯ್ ಮಾಡಲಿದ್ದಾರೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಟ್ರಿಪ್ ಅಥವಾ ಧಾರ್ಮಿಕ ಸ್ಥಳಗಳಿಗೆ ಹೋಗೋದಕ್ಕೆ ಯಾರೂ ಇಚ್ಛಿಸೋದಿಲ್ಲ. ಆದರೆ ಇದೀಗ ಸ್ತ್ರೀಶಕ್ತಿ ಗುಂಪುಗಳು ಕರ್ನಾಟಕದಲ್ಲಿರುವ ಎಲ್ಲ ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳಗಳನ್ನು ಒಂದೊಂದೇ ಕವರ್ ಮಾಡುತ್ತಿದ್ದಾರೆ. ಯಾವ ಧಾರ್ಮಿಕ ಸ್ಥಳಗಳಿಗೆ ಹೋಗಿ ನೋಡಿದರೂ ಇದೀಗ ಎಲ್ಲೆಡೆ ಮಹಿಳಾಮಣಿಗಳ ಗುಂಪಿನದ್ದೇ ಹವಾ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!