ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನು ಮಾಡಿದ್ದೇನೆ, ನನಗೆ ಬ್ಯಾಲೆನ್ಸ್ ಮಾಡುವ ಅಗತ್ಯವಿಲ್ಲ: ಪ್ರಕಾಶ್ ರಾಜ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಪ್ರಕಾಶ್ ರಾಜ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಪ್ರಕಾಶ್ ರೈ ಒಬ್ಬ ಶ್ರೇಷ್ಠ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ ಯಾವುದೇ ಪಾತ್ರವನ್ನು ವಹಿಸಿಕೊಟ್ಟರೂ ಅವರು ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಹಿಟ್ ಮತ್ತು ಫ್ಲಾಪ್ ಚಿತ್ರಗಳನ್ನು ಕೂಡ ನೀಡಿರುವ ಪ್ರಕಾಶ್ ರಾಜ್ ಈ ಬಗ್ಗೆ ಒಂದು ಹೇಳಿಕೆಯನ್ನು ನೀಡಿದ್ದಾರೆ.

ಬಹುತೇಕ ಎಲ್ಲರೂ ಹಣಕ್ಕಾಗಿ ಸಿನಿಮಾ ಮಾಡುತ್ತಾರೆ. ಕೆಲವರು ಇದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಪ್ರಕಾಶ್ ರಾಜ್ ಹಾಗಲ್ಲ. ಈ ವಿಷಯದಲ್ಲಿ ಅವರು ನೇರ ನುಡಿ. ಸಂದರ್ಶನ ಒಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಹಣಕ್ಕಾಗಿ ನಾನು ಕೆಲವೊಂದು ಸ್ಟುಪಿಡ್ ಚಿತ್ರಗಳನ್ನೂ ಕೂಡ ಮಾಡಿದ್ದೇನೆ ಎಂದಿದ್ದಾರೆ.

ಸಂದರ್ಶಕರು ಪ್ರಕಾಶ್ ರಾಜ್ ಅವರನ್ನು ಕೇಳಿದರು, “ನಾನು ಈ ಸಿನಿಮಾ ಮಾಡಿದರೆ ನನಗೆ ಹಣ ಸಿಗುತ್ತದೆ ಎಂದು ಯಾವಾಗಲೂ ಯೋಚನೆ ಮಾಡಿದ್ದೀರೇ” ಎಂದು ಕೇಳಿದಾಗ ಪ್ರಕಾಶ್ ಇದಕ್ಕೆ ಕೊಟ್ಟ ಉತ್ತರ ಹೀಗಿದೆ, ಹಣಕ್ಕಾಗಿ ಕೆಲವು ಸ್ಟುಪಿಡ್ ಸಿನಿಮಾ ಮಾಡಿದ್ದೇನೆ. ನಾನು ಬ್ಯಾಲೆನ್ಸ್ ಮಾಡಬೇಕಾಗಿಲ್ಲ. ನಾನು ಕಮರ್ಷಿಯಲ್ ಚಿತ್ರಗಳನ್ನು ದ್ವೇಷಿಸುವುದಿಲ್ಲ. ಅವುಗಳನ್ನು ಇಷ್ಟಪಡುವ ದೊಡ್ಡ ಪ್ರೇಕ್ಷಕರ ಸಮೂಹವೇ ಹೊಂದಿದ್ದಾರೆ. ಎಲ್ಲರೂ ಎಷ್ಟು ಶ್ರಮ ಹಾಕುತ್ತಾರೋ ಅಷ್ಟೇ ಶ್ರಮವನ್ನು ಅವರೂ ಹಾಕುತ್ತಾರೆ. ಅವರು ವಿಲನ್ ಆಗಿ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನನ್ನ ಮನಸ್ಸು ಅರೇ ಎಂಥ ಸಿನಿಮಾ ಮಾಡ್ತಾ ಇದೀಯಾ ಎನ್ನುತ್ತದೆ. ಆದರೆ, ನನಗೆ ಹಣ ಬೇಕಲ್ಲ ಎಂದಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!