ನೀರಿನ ಬಿಕ್ಕಟ್ಟು, ಏರುತ್ತಿರುವ ತಾಪಮಾನ: ತರಕಾರಿ ಬೆಲೆ ಏರಿಕೆ, ಎಲ್ಲೆಲ್ಲಿ ದರ ಹೆಚ್ಚಳ? ಇಲ್ಲಿದೆ ವಿವರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಮದುವೆ ಮತ್ತಿತರ ಸಮಾರಂಭಗಳ ಸೀಸನ್, ತಾಪಮಾನ ಏರಿಕೆ ಮತ್ತು ನೀರಿನ ಸಮಸ್ಯೆಗಳು ತರಕಾರಿ ಬೆಲೆಯಲ್ಲಿ ಗಣನೀಯ ಏರಿಕೆಗೆ ಕಾರಣ ಎಂದು ನಂಬಲಾಗಿದೆ. ಬೀನ್ಸ್, ಬೆಂಡೆಕಾಯಿ, ಟೊಮೆಟೊ, ನಿಂಬೆಹಣ್ಣು ಮತ್ತು ಇತರ ತರಕಾರಿಗಳ ಬೆಲೆಗಳು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಹೆಚ್ಚುತ್ತಿವೆ ಎಂದು ಸ್ಥಳೀಯರು ಹೇಳುತ್ತಾರೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಈ ಮೊದಲು ಕೆ.ಜಿ.ಗೆ ಬೀನ್ಸ್ ಬೆಲೆ 50-60 ರೂಪಾಯಿ ಇದ್ದರೆ, ಈಗ ಅದು ಕೆಜಿಗೆ 100 ರೂಪಾಯಿಗೆ ಏರಿಕೆಯಾಗಿದೆ. ಕರಾವಳಿ ಪ್ರದೇಶದಲ್ಲಿ, ಹೈಬ್ರಿಡ್ ಬೀನ್ಸ್ ಮುಖ್ಯವಾಗಿ ಬೆಂಗಳೂರಿನ ಹೊರವಲಯದಿಂದ ಮತ್ತು ಚಿಕ್ಕಮಗಳೂರಿನ ಮಾರುಕಟ್ಟೆಗಳಿಂದ ಸರಬರಾಜು ಮಾಡಲಾಗುತ್ತದೆ. ಕರಾವಳಿ ಭಾಗದಲ್ಲೂ ನೀರಿನ ಪರಿಸ್ಥಿತಿ ಹದಗೆಟ್ಟಿದ್ದು, ತರಕಾರಿ ಕೃಷಿಗೆ ಮಾರಕವಾಗಿ ಪರಿಣಮಿಸಿದೆ.

ಇದಕ್ಕೆ ವ್ಯತಿರಿಕ್ತವಾಗಿ ಇತ್ತೀಚಿನ ದಿನಗಳಲ್ಲಿ ದಿಢೀರ್ ಏರಿಕೆ ಕಂಡಿದ್ದ ಬೆಳ್ಳುಳ್ಳಿ ಬೆಲೆ ಇದೀಗ ಕೆಜಿಗೆ 200 ರೂ.ಗೆ ಇಳಿದಿದೆ. ಮತ್ತೊಂದೆಡೆ ಇತ್ತೀಚಿನ ದಿನಗಳಲ್ಲಿ ನಿಂಬೆ ಹಣ್ಣಿನ ಬೆಲೆಯೂ ಹೆಚ್ಚಾಗಿದ್ದು, ಮಧ್ಯಮ ಗಾತ್ರದ ನಿಂಬೆ ಹಣ್ಣನ್ನು 7 ರಿಂದ 8 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಶುಂಠಿ ಬೆಲೆ ಈಗ ಕೆಜಿಗೆ 160 ರಿಂದ 200 ರೂ. ಈರುಳ್ಳಿ ಕೆಜಿಗೆ 30 ರೂ. ಟೊಮೆಟೊ ಕೆಜಿಗೆ 25 ರೂ., ಸೀಬೆಕಾಯಿ ಕೆಜಿಗೆ 60-70 ರೂ., ಹೀರೇಕಾಯಿ ಕೆಜಿಗೆ 40 ರೂ., ಬೆಂಡೆಕಾಯಿ 80 ರೂ., ಹಸಿರು ಬದನೆ 80 ರೂ.ಗೆ ಮಾರಾಟವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!