ಕ್ರಿಕೆಟ್‌ ನಲ್ಲಿ ಸಾಧಿಸುವ ಗುರಿಗಾಗಿ 9 ವರ್ಷಗಳಿಂದ ಮನೆಗೆ ಹೋಗಿಲ್ಲ: ಮುಂಬೈ ಇಂಡಿಯನ್ಸ್‌ ಯುವ ಸ್ಪಿನ್ನರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
ಕಳೆದ ಒಂಬತ್ತು ವರ್ಷಗಳಿಂದ ಮನೆಗೆ ಹೋಗಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಿದ ಬಳಿಕವೇ ಮನೆಗೆ ಹಿಂತಿರಗಲು ನಿರ್ಧರಿಸಿ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡೆ ಎಂಬ ವಿಚಾರವನ್ನು ಮುಂಬೈ ಇಂಡಿಯನ್ಸ್‌ ತಂಡದ ಮಿಸ್ಟರಿ ಸ್ಪಿನ್ನರ್‌ ಕುಮಾರ ಕಾರ್ತಿಕೇಯ ಬಹಿರಂಗಪಡಿಸಿದ್ದಾರೆ.
ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಈ ಬಾರಿ ಅಂತಹ ಲಯದಲ್ಲಿಲ್ಲ. ಆದರೆ ತಂಡದ ಯುವ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ತಿಲಕ್‌ ವರ್ಮಾ, ಡೆವಾಲ್ಡ್‌ ಬ್ರೇವಿಸ್‌, ಹೃತ್ವಿಕ್‌ ಶೋಕೇನ್‌ ಜೊತೆಗೆ ಇದೀಗ ಕುಮಾರ್‌ ಕಾರ್ತಿಕೇಯ ಮಿಂಚುತ್ತಿದ್ದಾರೆ.
ಹಾಯಾಳು ಅರ್ಷದ್ ಖಾನ್‌ಗೆ ಬದಲಿಯಾಗಿ ಎಡಗೈ ಸ್ಪಿನ್ನರ್‌ ಕುಮಾರ ಕಾರ್ತಿಕೇಯ ಅವರನ್ನು ಮುಂಬೈ ಇಂಡಿಯನ್ಸ್‌ ತಂಡವು ಸೇರಿಸಿಕೊಂಡಿತ್ತು.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಾದಾರ್ಪಣೆ ಮಾಡಿದ್ದ ಕುಮಾರ್ ಕಾರ್ತಿಕೇಯ ಕೇವಲ 19 ರನ್‌ಗಳನ್ನು ಬಿಟ್ಟುಕೊಟ್ಟು ಆರ್‌ ಆರ್‌ ನಾಯಕ ಸಂಜು ಸ್ಯಾಮ್ಸನ್ ಅವರ ವಿಕೆಟ್ ಕಬಳಿಸಿದ್ದರು.
ಕಾರ್ತಿಕೇಯ ಉತ್ತರ ಪ್ರದೇಶದ ಸುಲ್ತಾನ್‌ಪುರ ಮೂಲದವರು. ದೈನಿಕ್ ಜಾಗರನ್ ನೊಂದಿಗೆ ಮಾತನಾಡುತ್ತಾ, ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಮೊದಲು ಸ್ವಲ್ಪ ಆತಂಕದಲ್ಲಿದ್ದೆ ಎಂಬುದನ್ನು ಒಪ್ಪಿಕೊಂಡರು. ನಾನು 9 ವರ್ಷಗಳಿಂದ ಮನೆಗೆ ಹೋಗಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಿದ ಮೆಲೆಯೇ ಮನೆಗೆ ಮರಳಲು ನಿರ್ಧರಿಸಿದ್ದೆ. ನನ್ನ ತಾಯಿ ತಂದೆ ಮನೆಗೆ ಮರಳುವಂತೆ ಒತ್ತಾಯಿಸುತ್ತಲೇ ಇದ್ದರು. ಆದರೆ ನಾನು ನನ್ನ ಗುರಿಗೆ ಬದ್ಧನಾಗಿದ್ದೆ. ಈಗ ಐಪಿಎಲ್ ನಂತರ ಮನೆಗೆ ಮರಳುವುದಾಗಿ ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!