Tuesday, March 21, 2023

Latest Posts

ಎಚ್‌ಡಿಕೆ ತಮ್ಮ ಬುದ್ದಿವಂತಿಕೆಯನ್ನು ಸದುಪಯೋಗ ಪಡೆಸಿಕೊಳ್ಳಬೇಕು: ಸಿ.ಸಿ.ಪಾಟೀಲ್

ಹೊಸದಿಗಂತ ವರದಿ,ಗದಗ :

ಬಿಜೆಪಿಯ ಲಿಂಗಾಯತ ಮತ ಬ್ಯಾಂಕ್‌ನ್ನು ವಿಚಿದ್ರ ಮಾಡಬೇಕು ಎನ್ನುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕುಮಾರಸ್ವಾಮಿ ಅವರ ಬ್ರಾಹ್ಮಣ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ ಲಿಂಗಾಯತರು ಬಿಜೆಪಿಯಿಂದ ಹಿಂದೆ ಸರಿಯಬೇಕು ಎನ್ನುವ ಉದ್ದೇಶದಿಂದ ಹೇಳಿಕೆ ಕೊಟ್ಟಿದ್ದಾರೆ. ಎಚ್‌ಡಿಕೆ ಅವರು ಬುದ್ದಿವಂತರು, ಮಾಹಿತಿಯನ್ನು ಸಂಗ್ರಹಿಸಿಕೊಂಡವರು. ಅವರು ತಮ್ಮ ಬುದ್ದಿವಂತಿಕೆಯನ್ನು ಸದುಪಯೋಗ ಪಡೆಸಿಕೊಳ್ಳಬೇಕೆಂದು ಹೇಳಿದರು.

ಅಮಿತ್ ಶಾ ಅವರು ಕುಮಾರಸ್ವಾಮಿ ಹೇಳಿಕೆಗೆ ನಮ್ಮ ಪಕ್ಷ ತಲೆಕೆಡಿಸಿಕೊಂಡಿಲ್ಲ, ಈ ರಾಜ್ಯದ ಜನತೆ ಕೂಡಾ ತಲೆ ಕೆಡಿಸಿಕೊಳ್ಳಬಾರದು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೈಯನ್ನು ಬಲ ಪಡಿಸಿ ಎನ್ನುವ ಮಾತು ಹೇಳಿದ್ದಾರೆ. ಬಸವರಾಜ ಬೊಮ್ಮಯಿ ಅವರ ನೇತೃತ್ವದಲ್ಲಿ ೧೩೦-೧೪೦ ಸ್ಥಾನ ಗೆಲುತ್ತೇವೆ. ನಮ್ಮ ಮುಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಪರೋಕ್ಷವಾಗಿ ಸಂದೇಶ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಅವರು ಶೇ. ೯೦ ರಷ್ಟು ಅನುದಾನವನ್ನು ಅನುಷ್ಠಾನ ತಂದಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!