ಈತ ವಿಶ್ವದ ಅತಿ ಕೊಳಕು ವ್ಯಕ್ತಿ, 67 ವರ್ಷದಿಂದ ಸ್ನಾನ ಇಲ್ಲ, ಆದರೂ ಮೈಯಲ್ಲಿ ಬ್ಯಾಕ್ಟೀರಿಯಾ ಇಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವೊಮ್ಮೆ ನಮ್ಮ ಆರೋಗ್ಯದ ಬಗ್ಗೆ ನಾವು ಅತಿ ಸೂಕ್ಷ್ಮವಾಗಿ ಇರುತ್ತೇವೆ. ಅತಿಯಾದ ಕಾಳಜಿ ಮಾಡಿದರೂ ಆರೋಗ್ಯ ಕೈ ಕೊಡುತ್ತದೆ.
ಆದರೆ ಇಲ್ಲೊಬ್ಬ ವ್ಯಕ್ತಿಯಿದ್ದಾನೆ, ಈತ ಬದುಕುತ್ತಿರುವ ರೀತಿಗೆ ಇವನ ಆರೋಗ್ಯ ಯಾವಾಗಲೋ ಹದಗೆಡಬೇಕಿತ್ತು. ಆದರೆ ಈತ ಪರ್ಫೆಕ್ಲಿ ಆಲ್‌ರೈಟ್!
ಇರಾನ್‌ನಲ್ಲಿರುವ ಅಮೌ ಹಾಕಿಗೆ 83 ವರ್ಷ. ಈತ 67 ವರ್ಷಗಳಿಂದ ಸ್ನಾನ ಮಾಡಿಲ್ಲ. ಕೊಚ್ಚೆ ನೀರು ಕುಡಿಯುವ ಈತ ರಸ್ತೆಯಲ್ಲಿ ಸಿಕ್ಕ ಸಿಕ್ಕ ಆಹಾರ ತಿನ್ನುತ್ತಾನೆ. ಆದರೆ ಯಾವ ಕಾಯಿಲೆಯೂ ಇಲ್ಲ.

ಆರು ದಶಕಗಳ ಹಿಂದೆಯೇ ಈತ ಮನೆ ಬಿಟ್ಟು ಬಂದಿದ್ದ. ಮುಳ್ಳು ಹಂದಿಗಳು, ಮೊಲಗಳನ್ನು ಈತ ಆಹಾರವಾಗಿ ಸೇವಿಸುತ್ತಾನೆ. ಕೊಚ್ಚೆ ನೀರನ್ನೇ ಕುಡಿಯುತ್ತಾನೆ. ಸ್ನಾನ ಮಾಡಿದರೆ ನನ್ನ ಆರೋಗ್ಯ ಹದಗೆಡುತ್ತದೆ ನಾನು ಈಗ ಚೆನ್ನಾಗಿದ್ದೇನೆ ಎಂದು ಅಮೌ ಹೇಳುತ್ತಾನೆ.

ಅಷ್ಟು ವರ್ಷಗಟ್ಟಲೆ ಸ್ನಾನ ಮಾಡದಿದ್ದರೂ ಈತನ ಮೈಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯಾಗದ್ದು ವಿಜ್ಞಾನಿಗಳಿಗೂ ಆಶ್ಚರ್ಯ. ಈತನಿಗೆ ಮನೆ ಮಠ, ಸ್ನೇಹಿತರು ಯಾರೂ ಇಲ್ಲ. ಒಬ್ಬಂಟಿಯಾಗಿದ್ದು, ಪ್ರಾಣಿಗಳ ಗೊಬ್ಬರವನ್ನು ಪೈಪ್‌ನಲ್ಲಿ ತುಂಬಿಸಿ ಸಿಗರೇಟ್ ರೀತಿ ಅದನ್ನೇ ಸೇದುತ್ತಾನೆ. ಈ ಹಿಂದೆ ಈತ ಭೂಮಿಯಲ್ಲೇ ರಂಧ್ರ ಕೊರೆದು ವಾಸಿಸುತ್ತಿದ್ದ. ಇದನ್ನು ನೋಡಲಾರದೆ ಸ್ಥಳೀಯರು ಗುಡಿಸಲೊಂದನ್ನು ಕಟ್ಟಿ ಕೊಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!