ಕೊಡಗು| ಸೇವಾ ಭಾರತಿಯಿಂದ ಆರೋಗ್ಯ ತಪಾಸಣೆ-ಉಚಿತ ಔಷಧ ವಿತರಣೆ

ಹೊಸದಿಗಂತ ವರದಿ, ಕೊಡಗು:
ಸೇವಾ ಭಾರತಿ ಕೊಡಗು ಘಟಕದ ವತಿಯಿಂದ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಬಾರಿಕಾಡು ಪೈಸಾರಿಯಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಿ ಅವಶ್ಯಕತೆ ಇದ್ದವರಿಗೆ ಔಷಧ ವಿತರಿಸಲಾಯಿತು.
ಸುಮಾರು ನಲವತ್ತಕ್ಕೂ ಅಧಿಕ ಮಂದಿ ಪೈಸಾರಿ ನಿವಾಸಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಔಷಧಿಯನ್ನು ಪಡೆದರು.
ಕೊಡಗು ವೈದ್ಯಕೀಯ ಕಾಲೇಜಿನ ವೈದ್ಯರಾದ ಡಾ.ರಮ್ಯಶ್ರೀ, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಹಾಗೂ ಸಂಘದ ಕಾರ್ಯಕರ್ತ ಲಿಖಿತ್, ಕೆದಮುಳ್ಳೂರು ಸಮುದಾಯದ ಆರೋಗ್ಯ ಕೇಂದ್ರದ ಆಧಿಕಾರಿ ನಿತಿನ್ ತಪಾಸಣೆ ಮಾಡಿ ಔಷಧ ವಿತರಿಸಿದರು.
ಈ ಸಂದರ್ಭ ಸೇವಾ ಭಾರತಿ ಕೊಡಗು ಘಟಕದ ಅಧ್ಯಕ್ಷ ಟಿ.ಸಿ.ಚಂದ್ರನ್, ವನವಾಸಿ ಕಲ್ಯಾಣ ಕರ್ನಾಟಕ ಅಧ್ಯಕ್ಷ ಚೆಕ್ಕೇರ ಮನು ಕಾವೇರಪ್ಪ, ಸೇವಾ ಭಾರತಿ ಪ್ರಮುಖರಾದ ಚಂದ್ರ ಉಡೋತ್, ಪದ್ಮನಾಭ ಹಾಗೂ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!