ಮಹಿಳೆ ಮೇಲೆ ಪ್ರಯಾಣಿಕ ಮೂತ್ರ ವಿಸರ್ಜನೆ: ಕ್ಷಮೆ ಕೋರಿದ ಏರ್ ಇಂಡಿಯಾ ಸಿಇಒ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಮಾನದಲ್ಲಿ ಮಹಿಳೆ ಮೇಲೆ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ಕಂಪನಿಯ ಸಿಇಒ ಕ್ಯಾಂಪ್​​ಬೆಲ್ ವಿಲ್ಸನ್ ಕ್ಷಮೆ ಕೋರಿದ್ದಾರೆ.

ವಿಮಾನ ಸಂಚಾರದ ವೇಳೆ ಆಲ್ಕೋಹಾಲ್ ನೀಡುವುದಕ್ಕೆ ಸಂಬಂಧಿಸಿದ ನೀತಿಯನ್ನು ಪರಾಮರ್ಶಿಸಲಾಗುವುದು. ಅದೇ ರೀತಿ ಪರಿಸ್ಥಿತಿಯನ್ನು ಸಿಬ್ಬಂದಿ ಇನ್ನಷ್ಟು ಉತ್ತಮವಾಗಿ ನಿರ್ವಹಿಸಬಹುದಿತ್ತು. ವಿಮಾನದ ಸಿಬ್ಬಂದಿ ಮತ್ತು ಪೈಲಟ್​ಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗ್ರಾಹಕರಿಗೆ ಆಗಿರುವ ತೊಂದರೆ ಬಗ್ಗೆ ಏರ್​ ಇಂಡಿಯಾ ತೀವ್ರ ಕಾಳಜಿ ಹೊಂದಿದೆ. ಇಂಥ ಘಟನೆಗಳ ಬಗ್ಗೆ ತೀವ್ರ ವಿಷಾದವಿದೆ. ಕಠಿಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ವಿಲ್ಸನ್ ಹೇಳಿದ್ದಾರೆ.

ನ್ಯೂಯಾರ್ಕ್​​ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್​ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್ ಆಸನ ವಿಭಾಗದಲ್ಲಿ ಕುಡಿದ ಅಮಲಿನಲ್ಲಿ ಶಂಕರ್ ಮಿಶ್ರಾ ಎಂಬ ವ್ಯಕ್ತಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದರು. ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!