March 30, 2026
Monday, March 30, 2026
spot_img

Health | ಬೇಸಿಗೆಯಲ್ಲಿ ಪದೇ ಪದೇ ಫ್ರಿಡ್ಜ್ ನೀರು ಕುಡಿತೀರಾ? ಹುಷಾರ್

ಬೇಸಿಗೆ ಬಂತು ಅಂದಾಕ್ಷಣ ತಣ್ಣನೆಯ ನೀರೇ ಮೊದಲು ನೆನಪಿಗೆ ಬರುತ್ತದೆ. ಹೊರಗಿನಿಂದ ಬೆವರುತ್ತಾ ಮನೆಗೆ ಬಂದ ತಕ್ಷಣ ಹಲವರು ಫ್ರಿಡ್ಜ್ ತೆರೆದು ಐಸ್‌ ಕೋಲ್ಡ್ ನೀರನ್ನು ಗ್ಲಾಸ್ ಗೆ ತುಂಬಿಸಿಕೊಂಡು ಕುಡಿಯುತ್ತಾರೆ. ಆ ಕ್ಷಣಕ್ಕೆ ಅದು ದೇಹಕ್ಕೆ ತಂಪು ಕೊಟ್ಟಂತೆ ಅನಿಸಿದರೂ, ಪದೇ ಪದೇ ಹೀಗೆ ಕುಡಿಯುವುದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ತಜ್ಞರ ಪ್ರಕಾರ, ತುಂಬಾ ತಣ್ಣನೆಯ ನೀರನ್ನು ಒಮ್ಮೊಮ್ಮೆ ಕುಡಿಯುವುದರಲ್ಲಿ ದೊಡ್ಡ ಸಮಸ್ಯೆ ಇರದಿದ್ದರೂ, ದಿನವಿಡೀ ಪದೇ ಪದೇ ಫ್ರಿಡ್ಜ್ ನೀರು ಕುಡಿಯುವುದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಬಹುದು. ವಿಶೇಷವಾಗಿ ಊಟದ ತಕ್ಷಣ ಕುಡಿದರೆ ಹೊಟ್ಟೆಯಲ್ಲಿ ಆಹಾರ ಜೀರ್ಣವಾಗುವ ಪ್ರಕ್ರಿಯೆಗೆ ತೊಂದರೆ ಉಂಟಾಗಬಹುದು. ಕೆಲವರಿಗೆ ಹೊಟ್ಟೆ ಉಬ್ಬರ, ಗಂಟಲು ನೋವು ಅಥವಾ ಶೀತದ ಸಮಸ್ಯೆಯೂ ಕಾಣಿಸಬಹುದು.

ಇದನ್ನೂ ಓದಿ:

ಬೇಸಿಗೆಯಲ್ಲಿ ದೇಹದ ತಾಪಮಾನ ಈಗಾಗಲೇ ಹೆಚ್ಚು ಇರುತ್ತದೆ. ಅಂಥ ಸಮಯದಲ್ಲಿ ತುಂಬಾ ಚಳಿಯ ನೀರು ದೇಹಕ್ಕೆ ಏಕಾಏಕಿ ಹೋದರೆ ಗಂಟಲು ಮತ್ತು ಮೂಗಿನ ಭಾಗದ ಸಂವೇದನಾಶೀಲ ತಂತುಗಳ ಮೇಲೆ ಒತ್ತಡ ಬೀಳಬಹುದು. ಇದರ ಪರಿಣಾಮವಾಗಿ ಕೆಲವರಿಗೆ ತಲೆನೋವು ಅಥವಾ ಗಂಟಲು ಕಿರಿಕಿರಿ ಆಗಬಹುದು.

ಅದರ ಬದಲು ಸಾಮಾನ್ಯ ತಂಪಾದ ನೀರು ಅಥವಾ ಮಣ್ಣಿನ ಮಡಿಕೆಯಲ್ಲಿ ಇಟ್ಟ ನೀರನ್ನು ಕುಡಿಯುವುದು ಉತ್ತಮ. ಇದು ದೇಹಕ್ಕೆ ಸಹಜ ತಂಪು ನೀಡುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

ಹೀಗಾಗಿ ಬೇಸಿಗೆಯಲ್ಲಿ ಫ್ರಿಡ್ಜ್ ನೀರು ಕುಡಿಯುವಾಗ ಸ್ವಲ್ಪ ಜಾಗ್ರತೆ ಇರಲಿ. ಕ್ಷಣಿಕ ತಂಪಿಗಾಗಿ ಆರೋಗ್ಯವನ್ನು ಪಣಕ್ಕಿಡಬೇಡಿ. ಸರಿಯಾದ ಪ್ರಮಾಣದಲ್ಲಿ, ಸರಿಯಾದ ತಾಪಮಾನದಲ್ಲಿರುವ ನೀರೇ ದೇಹಕ್ಕೆ ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !