July 19, 2026
Sunday, July 19, 2026
spot_img

Health | ದಿನಕ್ಕೆ ಎಷ್ಟು ಕಪ್ ಕಾಫಿ ಸುರಕ್ಷಿತ? ಅತಿಯಾದ ಕೆಫೀನ್ ಸೇವನೆಯ ಸೈಡ್ ಎಫೆಕ್ಟ್ಸ್ ಏನು?

ಇಂದಿನ ಓಟದ ಜಗತ್ತಿನಲ್ಲಿ ಎನರ್ಜಿ ಹೆಚ್ಚಿಸಿಕೊಳ್ಳಲು ಹಲವರು ಕಾಫಿ, ಟೀ ಅಥವಾ ಎನರ್ಜಿ ಡ್ರಿಂಕ್ಸ್‌ಗಳನ್ನು ಅತಿಯಾಗಿ ಅವಲಂಬಿಸಿದ್ದಾರೆ. ಆದರೆ, ಇವುಗಳಲ್ಲಿರುವ ಕೆಫೀನ್ ಅಂಶವು ಮಿತಿಗಿಂತ ಹೆಚ್ಚಾದರೆ ದೇಹಕ್ಕೆ ಮಾರಕವಾಗಬಹುದು.

ಹೃದಯದ ಆರೋಗ್ಯಕ್ಕೆ ಕುತ್ತು

ಅತಿಯಾದ ಕೆಫಿನ್ ಸೇವನೆಯು ರಕ್ತದೊತ್ತಡವನ್ನು ದಿಡೀರನೆ ಹೆಚ್ಚಿಸುತ್ತದೆ. ಇದು ಹೃದಯ ಬಡಿತದ ವೇಗವನ್ನು ಅಸಮತೋಲನಗೊಳಿಸಿ, ದೀರ್ಘಾವಧಿಯಲ್ಲಿ ಹೃದಯಾಘಾತದಂತಹ ಗಂಭೀರ ಅಪಾಯಗಳಿಗೆ ದಾರಿ ಮಾಡಿಕೊಡಬಹುದು.

ನಿದ್ರಾಹೀನತೆ ಮತ್ತು ಆತಂಕ

ಕೆಫಿನ್ ಮೆದುಳನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ. ಆದರೆ ಇದರ ಅತಿಯಾದ ಪ್ರಮಾಣವು ಗಾಢ ನಿದ್ದೆಗೆ ಅಡ್ಡಿಪಡಿಸುತ್ತದೆ. ಪರಿಣಾಮವಾಗಿ ನಿದ್ರಾಹೀನತೆ, ಮಾನಸಿಕ ಆತಂಕ, ಮತ್ತು ಸಣ್ಣ ವಿಷಯಕ್ಕೂ ಕಿರಿಕಿರಿ ಉಂಟಾಗುವ ಸಾಧ್ಯತೆ ಹೆಚ್ಚು.

ಜೀರ್ಣಕ್ರಿಯೆಯ ತೊಂದರೆಗಳು

ಹೆಚ್ಚು ಕೆಫಿನ್ ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲದ (Acid) ಉತ್ಪಾದನೆ ಹೆಚ್ಚುತ್ತದೆ. ಇದು ಗ್ಯಾಸ್ಟ್ರಿಕ್, ಎದೆಯುರಿ ಹಾಗೂ ಅಜೀರ್ಣದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಲ್ಲದೆ, ಇದು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಿ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

ತಜ್ಞರ ಪ್ರಕಾರ ದಿನಕ್ಕೆ 400 ಮಿಲಿಗ್ರಾಂ (ಸುಮಾರು 3 ರಿಂದ 4 ಕಪ್ ಕಾಫಿ) ಗಿಂತ ಹೆಚ್ಚು ಕೆಫಿನ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಿತವಾದ ಬಳಕೆ ಮಾತ್ರ ಸುರಕ್ಷಿತ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !