April 29, 2026
Wednesday, April 29, 2026
spot_img

Health | ಒಬ್ಬ ಮನುಷ್ಯ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಎಣ್ಣೆ ಸೇವಿಸೋದು ಬೆಸ್ಟ್? FSSAI ಏನ್ ಹೇಳುತ್ತೆ?

ನಾವು ದಿನನಿತ್ಯ ಆರೋಗ್ಯಕರ ಆಹಾರ ಸೇವಿಸುತ್ತಿದ್ದೇವೆ ಎಂದುಕೊಂಡರೂ, ಅಡುಗೆಯಲ್ಲಿ ಬಳಸುವ ಎಣ್ಣೆಯ ಪ್ರಮಾಣದ ಬಗ್ಗೆ ಹೆಚ್ಚಿನವರು ಗಮನ ಕೊಡುವುದಿಲ್ಲ. ಆದರೆ ಇದೇ ಅಂಶವು ದೇಹದ ತೂಕ, ಹೃದಯ ಆರೋಗ್ಯ ಮತ್ತು ಯಕೃತ್ತಿನ ಕಾರ್ಯಕ್ಷಮತೆ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇತ್ತೀಚೆಗೆ FSSAI ಹಂಚಿಕೊಂಡ ಜಾಗೃತಿ ವಿಡಿಯೋದಲ್ಲಿ ಯಕೃತ್ತಿನ ತಜ್ಞ ಡಾ. ಶಿವ್ ಸರಿನ್, ದಿನಕ್ಕೆ ಎಷ್ಟು ಎಣ್ಣೆ ಸೇವಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ.

ತಜ್ಞರ ಪ್ರಕಾರ, ಒಟ್ಟು ದೈನಂದಿನ ಕ್ಯಾಲೊರಿಗಳಲ್ಲಿ ಎಣ್ಣೆ ಮತ್ತು ಕೊಬ್ಬಿನ ಪ್ರಮಾಣ ಗರಿಷ್ಠ 20 ಶೇಕಡಕ್ಕಿಂತ ಹೆಚ್ಚು ಇರಬಾರದು. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನಕ್ಕೆ ಸುಮಾರು 4 ರಿಂದ 6 ಚಮಚ ಎಣ್ಣೆ ಅಥವಾ ತುಪ್ಪವನ್ನು ಅರಿವಿಲ್ಲದೆ ಸೇವಿಸುತ್ತಾನೆ. ಒಂದು ಚಮಚದಲ್ಲಿ ಸುಮಾರು 5 ಗ್ರಾಂ ಕೊಬ್ಬು ಇರುವುದರಿಂದ, ಇದು ಶೀಘ್ರವೇ ಸುರಕ್ಷಿತ ಮಿತಿಯನ್ನು ಮೀರುವ ಸಾಧ್ಯತೆ ಇದೆ.

ಇದನ್ನೂ ಓದಿ:

ಡಾ. ಸರಿನ್ ಅವರು ಅಡುಗೆಯಲ್ಲಿ ಹೆಚ್ಚುವರಿ ಎಣ್ಣೆ ಬಳಕೆ ಕಡಿಮೆ ಮಾಡಿದಷ್ಟು ದೇಹಕ್ಕೆ ಲಾಭವಾಗುತ್ತದೆ ಎಂದು ಅವರು ಹೇಳಿದ್ದಾರೆ. ಕಡಲೆಕಾಯಿ, ಬಾದಾಮಿ ಹಾಗೂ ವಾಲ್ನಟ್‌ಗಳಲ್ಲಿ ಇರುವ ನೈಸರ್ಗಿಕ ಕೊಬ್ಬು ದೇಹಕ್ಕೆ ಉಪಯುಕ್ತವಾಗಿದ್ದು, ವಿಶೇಷವಾಗಿ ವಾಲ್ನಟ್‌ನಲ್ಲಿ ಇರುವ ಒಮೆಗಾ-3 ಕೊಬ್ಬಿನಾಮ್ಲಗಳು ಹೃದಯ ಆರೋಗ್ಯಕ್ಕೆ ಸಹಾಯಕವಾಗಿವೆ.

ತಜ್ಞರ ಸಲಹೆಯಂತೆ, ‘ಹೆಚ್ಚು ಎಣ್ಣೆ ಇದ್ದರೆ ಮಾತ್ರ ರುಚಿ’ ಎಂಬ ಮನೋಭಾವದಿಂದ ಹೊರಬಂದು, ಕಡಿಮೆ ಎಣ್ಣೆಯ ಅಡುಗೆ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಆರೋಗ್ಯಕರ ಜೀವನಶೈಲಿಗೆ ಮುಖ್ಯ ಹೆಜ್ಜೆ ಎಂದು ತಿಳಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !