August 30, 2026
Sunday, August 30, 2026
spot_img

Health | ಮಳೆಗಾಲದಲ್ಲಿ ಮೊಸರು ತಿಂದರೆ ಆರೋಗ್ಯಕ್ಕೆ ಕೆಟ್ಟದ್ದೇ? ಇಲ್ಲಿದೆ ಅಸಲಿ ಆರೋಗ್ಯ ರಹಸ್ಯ

ಮಳೆಗಾಲ ಶುರುವಾಯಿತೆಂದರೆ ಸಾಕು, ನಮ್ಮ ಮನೆಗಳಲ್ಲಿ ಹಿರಿಯರು “ಮೊಸರು ತಿನ್ನಬೇಡ, ಶೀತ-ಕೆಮ್ಮು ಬರುತ್ತದೆ” ಎಂದು ಸಲಹೆ ನೀಡುತ್ತಾರೆ. ಆದರೆ ಇದು ನಿಜಕ್ಕೂ ಸತ್ಯವೇ? ಈ ವಿಷಯದ ಕುರಿತು ವೈಜ್ಞಾನಿಕ ಮತ್ತು ಆಯುರ್ವೇದ ದೃಷ್ಟಿಕೋನವನ್ನು ತಿಳಿಯೋಣ.

ವೈಜ್ಞಾನಿಕ ಮತ್ತು ಆಯುರ್ವೇದ ಏನು ಹೇಳುತ್ತದೆ?

ವೈಜ್ಞಾನಿಕ ಪ್ರಕಾರ, ಮೊಸರು ತಿಂದ ತಕ್ಷಣ ಶೀತ ಅಥವಾ ಕೆಮ್ಮು ಬರುವುದಿಲ್ಲ. ಶೀತ ಮತ್ತು ಕೆಮ್ಮು ವೈರಸ್ ಹಾಗೂ ಬ್ಯಾಕ್ಟೀರಿಯಾಗಳ ಸೋಂಕಿನಿಂದ ಉಂಟಾಗುತ್ತವೆ. ಆದರೆ, ಆಯುರ್ವೇದದ ಪ್ರಕಾರ ಮೊಸರು ‘ಕಫ’ ಪ್ರಕೃತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ತಂಪಾದ ವಾತಾವರಣದಲ್ಲಿ ಅಥವಾ ರಾತ್ರಿ ವೇಳೆ ತಣ್ಣಗಿರುವ ಮೊಸರು ತಿಂದಾಗ ದೇಹದ ಉಷ್ಣಾಂಶ ಕಡಿಮೆಯಾಗಿ, ಗಂಟಲು ಕಿರಿಕಿರಿ ಉಂಟಾಗಬಹುದು.

ಮೊಸರಿನಲ್ಲಿದೆ ಪೋಷಕಾಂಶಗಳ ಗಣಿ

ಮೊಸರನ್ನು ಮಳೆಗಾಲದಲ್ಲೂ ಸರಿಯಾದ ರೀತಿಯಲ್ಲಿ ಸೇವಿಸಿದರೆ ಅದು ದೇಹಕ್ಕೆ ಉತ್ತಮ ಲಾಭ ನೀಡುತ್ತದೆ:

  • ರೋಗನಿರೋಧಕ ಶಕ್ತಿ: ಮೊಸರಿನಲ್ಲಿ ಉತ್ತಮ ಪ್ರಮಾಣದ ಪ್ರೋಬಯೋಟಿಕ್ಸ್ ಇದ್ದು, ಇವು ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತವೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
  • ಜೀರ್ಣಕ್ರಿಯೆಗೆ ಸಹಕಾರಿ: ಮಳೆಗಾಲದಲ್ಲಿ ಜೀರ್ಣಕ್ರಿಯೆ ಮಂದವಾಗುತ್ತದೆ. ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತವೆ.
  • ಪೋಷಕಾಂಶಗಳ ಸರದಾರ: ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ B-12 ಮತ್ತು ರಂಜಕ ಸಮೃದ್ಧವಾಗಿದ್ದು, ಮೂಳೆಗಳನ್ನು ಬಲಪಡಿಸುತ್ತದೆ.

ಒಟ್ಟಾರೆಯಾಗಿ, ಮಳೆಗಾಲದಲ್ಲಿ ಸರಿಯಾದ ಸಮಯ ಮತ್ತು ವಿಧಾನದಲ್ಲಿ ಮೊಸರು ಸೇವಿಸಿದರೆ ಅದು ಆರೋಗ್ಯಕ್ಕೆ ಯಾವುದೇ ಹಾನಿ ಮಾಡುವುದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !