Tuesday, October 3, 2023

Latest Posts

ಅತ್ಯಾಚಾರ ಆರೋಪ: ಸ್ಯಾಂಡಲ್‌ವುಡ್ ನಟ ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತ್ಯಾಚಾರ ಹಾಗೂ ಜೀವ ಬೆದರಿಕೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ವೀರೇಂದ್ರ ಬಾಬುವನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿ ವಿಡಿಯೋ ಮಾಡಿ, ವಿಡಿಯೋ ಲೀಕ್ ಮಾಡುವುದಾಗಿ ಸಂತ್ರಸ್ತೆಗೆ ಬ್ಲಾಕ್ ಮೇಲ್ ಮಾಡಿದ್ದ ಆರೋಪದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Kannada actor Veerendra Babu arrested in Bengaluru for duping man of Rs 1.8  crore - Entertainment News15 ಲಕ್ಷ ರೂಪಾಯಿಗೆ ಬೇಡಿಕೆ ಜತೆಗೆ ಕೊಲೆ ಬೆದರಿಕೆ ಹಾಕಿದ ಆರೋಪವೂ ವೀರೇಂದ್ರ ಬಾಬು ಮೇಲಿದೆ. ಪ್ರಕರಣ ನಡೆದು ವರ್ಷವಾಗಿದೆ. ಮಹಿಳೆ ವಿಡಿಯೋ ಹೊರಬರುವ ಭಯಕ್ಕೆ ತನ್ನ ಬಳಿ ಇದ್ದ ವಡವೆಗಳನ್ನು ಮಾರಿ ಹಣ ನೀಡಿದ್ದಳು. ಆದರೆ ಇದೀಗ ಮತ್ತೆ ಕೆಲ ದಿನಗಳ ಹಿಂದೆ ಆತ ಹಣಕ್ಕೆ ಬೇಡಿಕೆ ಹಾಕಿದ್ದಾನೆ.

ಅಷ್ಟೆ ಅಲ್ಲದೆ ಮಹಿಳೆಯನ್ನು ಭೇಟಿ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿ, ಮಹಿಳೆ ಕೊಡಲು ಒಪ್ಪದಿದ್ದಕ್ಕೆ ಆಕೆಯ ಮೈಮೇಲಿದ್ದ ಬಂಗಾರವನ್ನು ಕಿತ್ತುಕೊಂಡಿದ್ದಾನೆ. ಗನ್ ಇಟ್ಟುಕೊಂಡು ಒಡವೆ ಕೊಡುವಂತೆ ಬೆದರಿಸಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!