HEALTH | ದೇಹದಲ್ಲಿ ಮೆಗ್ನೀಶಿಯಂ ಕೊರತೆಯಿಂದ ಆಗುವ ತೊಂದರೆಗಳೇನು?

ಹೊಸದಿಂಗತ ಡಿಜಿಟಲ್ ಡೆಸ್ಕ್:

ದೇಹಕ್ಕೆ ಸೂಕ್ಷ್ಮ ಪೋಷಕಾಂಶಗಳ ಕೊರತೆಯಾದರೆ ಅದನ್ನು ಶರೀರ ಹಲವು ರೀತಿಯಲ್ಲಿ ತೋರ್ಪಡಿಸುತ್ತದೆ. ಈ ಲಕ್ಷಣಗಳು ಕೆಲವೊಮ್ಮೆ ಸೌಮ್ಯವಾಗಿ ಇರಬಹುದು ಅಥವಾ ತೀವ್ರವಾಗಿಯೂ ಕಾಣಬಹುದು.

ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಆಯಾಸದಂಥಹ ಅಥವಾ ರೋಗ ನಿರೋಧಕ ಶಕ್ತಿ ಕುಂದಿದಂಥ ಲಕ್ಷಣಗಳು ಕಂಡುಬರುತ್ತವೆ. ಅಂಥದ್ದೇ ವಿಷಯವೊಂದನ್ನು ಗಮನಿಸುವುದಾದರೆ, ಮೆಗ್ನೀಶಿಯಂ ನಮಗೆ ಅಗತ್ಯವಾದಂಥ ಖನಿಜಗಳಲ್ಲಿ ಒಂದು. ಇದು ದೇಹಕ್ಕೆ ಕೊರತೆಯಾದರೆ ಕಂಡು ಬರುವ ಸೂಚನೆಗಳೇನು?

ದೇಹದಲ್ಲಿನ ನೂರಾರು ಜೈವಿಕ ಮತ್ತು ರಾಸಾಯನಿಕ ಕ್ರಿಯೆಗಳು ನಡೆಯುವುದಕ್ಕೆ ಮೆಗ್ನೀಶಿಯಂ ಖನಿಜ ಅಗತ್ಯ. ಸ್ನಾಯುಗಳು ಬಲಗೊಳ್ಳುವುದಕ್ಕೆ, ದೇಹ ಪ್ರತಿರೋಧಕ ಶಕ್ತಿ ಪ್ರಬಲವಾಗಿರುವುದಕ್ಕೆ, ರಕ್ತದೊತ್ತಡ ನಿಯಂತ್ರಣಕ್ಕೆ- ಹೀಗೆ ಹತ್ತು ಹಲವು ಕೆಲಸಗಳು ಸಾಂಗವಾಗಿ ನೆರವೇರುವುದಕ್ಕೆ ಮೆಗ್ನೀಶಿಯಂ ಬೇಕೆಬೇಕು.

ಇದನ್ನು ತನ್ನಷ್ಟಕ್ಕೆ ತಾನೇ ಸಿದ್ಧಪಡಿಸಿಕೊಳ್ಳುವುದು ದೇಹಕ್ಕೆ ಸಾಧ್ಯವಿಲ್ಲ. ನಾವು ತಿನ್ನುವ ಆಹಾರಗಳ ಮೂಲಕವೇ ಮೆಗ್ನೀಶಿಯಂ ಒದಗಬೇಕು. ಮೆಗ್ನೀಶಿಯಂ ಕೊರತೆಯ ಲಕ್ಷಣಗಳು ಕೆಲವೊಮ್ಮೆ ಸೌಮ್ಯವಾಗಿ, ಒಮ್ಮೊಮ್ಮೆ ತೀವ್ರವಾಗಿ ಕಾಣಿಸಿಕೊಳ್ಳಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದರೂ ಒಂದಿಷ್ಟು ಸಾಮಾನ್ಯ ಲಕ್ಷಣಗಳು ಇದ್ದೇ ಇರುತ್ತವೆ.

ದೇಹದಲ್ಲಿ ಸೂಕ್ತ ಪ್ರಮಾಣದಲ್ಲಿ ಶಕ್ತಿ ಸಂಚಯನವಾಗುವುದಕ್ಕೆ ಮೆಗ್ನೀಶಿಯಂ ಬೇಕು. ತಿಂದ ಆಹಾರ ಶಕ್ತಿಯಾಗಿ ಬದಲಾಗುವ ಹಂತದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗೆ ಮೆಗ್ನೀಶಿಯಂನಂಥ ಖನಿಜಗಳು ಮುಖ್ಯವಾಗುತ್ತವೆ. ಅದು ಕಡಿಮೆಯಾದರೆ ದೇಹದಲ್ಲಿ ಸಹಜವಾಗಿ ಆಯಾಸ, ಸುಸ್ತು ತಲೆದೋರುತ್ತದೆ.

ಧಾನ್ಯಗಳು, ಕಾಯಿ-ಬೀಜಗಳು, ಕಾಳುಗಳು, ಹಸಿರು ಸೊಪ್ಪು-ತರಕಾರಿಗಳು, ಬೆಣ್ಣೆ ಹಣ್ಣು, ಡಾರ್ಕ್‌ ಚಾಕಲೇಟ್‌, ಕೆಲವು ಕೊಬ್ಬಿನ ಅಂಶದ ಮೀನುಗಳು, ಬಾಳೆಹಣ್ಣು ಮುಂತಾದವುಗಳಲ್ಲಿ ಮೆಗ್ನೀಶಿಯಂ ಹೇರಳವಾಗಿ ದೊರೆಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!