ಬೀಟ್ರೂಟ್ ರೈಸ್ ರುಚಿಯಾದ, ಆರೋಗ್ಯವಾದ ಮತ್ತು ಸುಲಭವಾಗಿ ತಯಾರಿಸಬಹುದಾದ ಒಂದು ಅಡುಗೆಯಾಗಿದೆ. ಇದು ಮಕ್ಕಳಿಗೆ ಲಂಚ್ ಬಾಕ್ಸ್‌ಗೆ ನೀಡಲು ಅತ್ಯುತ್ತಮ ಆಯ್ಕೆಯಾಗಿದ್ದು, ಇದರಲ್ಲಿ ವಿಟಮಿನ್ ಸಿ, ಫೈಬರ್, ಕಬ್ಬಿಣದ ಅಂಶ ಮತ್ತು ಫೋಲೇಟ್ ಸಮೃದ್ಧವಾಗಿದೆ. ಇದು ರಕ್ತಹೀನತೆಯನ್ನು ತಡೆಯಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.
ಬೇಕಾಗುವ ಸಾಮಾಗ್ರಿಗಳು:
ಅನ್ನ
ಬೀಟ್ರೂಟ್
ಈರುಳ್ಳಿ
ಎಣ್ಣೆ ಅಥವಾ ತುಪ್ಪ
ಸಾಸಿವೆ
ಜೀರಿಗೆ
ಕಡಲೆಬೇಳೆ
ಉದ್ದಿನಬೇಳೆ
ಶೇಂಗಾ
ಕರಿಬೇವು
ಹಸಿರು ಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಅರಿಶಿನ ಪುಡಿ
ಖಾರದ ಪುಡಿ
ಗರಂ ಮಸಾಲಾ
ಉಪ್ಪು
ನಿಂಬೆ ರಸ
ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ :
ಮೊದಲು ಅನ್ನವನ್ನು ಮಾಡಿಟ್ಟುಕೊಳ್ಳಬೇಕು. ಬಳಿಕ ಬೀಟ್ರೂಟ್ ಅನ್ನು ತೊಳೆದು, ಸಿಪ್ಪೆ ಸುಲಿದು ತುರಿದುಕೊಂಡು, ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಮತ್ತು ಶೇಂಗಾ ಹಾಕಿ ಹುರಿದುಕೊಳ್ಳಬೇಕು. ಬಳಿಕ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು, ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿದ ನಂತರ ತುರಿದ ಬೀಟ್ರೂಟ್, ಅರಿಶಿನ, ಖಾರದ ಪುಡಿ, ಗರಂ ಮಸಾಲಾ ಅಥವಾ ಸಾಂಬಾರ್ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಬೀಟ್ರೂಟ್ ಮೃದುವಾಗುವವರೆಗೆ 3-4 ನಿಮಿಷ ಬೇಯಿಸಬೇಕು. ಬಳಿಕ ಮೊದಲೇ ಸಿದ್ಧವಾದ ಅನ್ನವನ್ನು ಮಸಾಲೆಗೆ ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿದರೆ ರುಚಿರುಚಿಯಾದ ಬೀಟ್ರೂಟ್ ರೈಸ್ ಸಿದ್ಧವಾಗುತ್ತದೆ.



