ತರಕಾರಿ ರಾಗಿ ಮುದ್ದೆ ಎಂಬುದು ಸಾಂಪ್ರದಾಯಿಕ ರಾಗಿ ಮುದ್ದೆಗೆ ತರಕಾರಿಗಳನ್ನು ಸೇರಿಸಿ ಮಾಡುವ ಒಂದು ವಿಭಿನ್ನ, ರುಚಿಕರ ಮತ್ತು ಅತ್ಯಂತ ಆರೋಗ್ಯಕರ ರೆಸಿಪಿಯಾಗಿದೆ. ತೂಕ ಇಳಿಸಲು ಮತ್ತು ಮಧುಮೇಹ ನಿಯಂತ್ರಣಕ್ಕೆ ಇದು ರಾತ್ರಿ ಊಟಕ್ಕೆ ಅತ್ಯುತ್ತಮ ಆಯ್ಕೆ.
ಬೇಕಾಗುವ ಸಾಮಗ್ರಿಗಳು:
ರಾಗಿ ಹಿಟ್ಟು
ಸಣ್ಣಗೆ ಹೆಚ್ಚಿದ ತರಕಾರಿಗಳು: (ಕ್ಯಾರೆಟ್, ಬೀನ್ಸ್, ಹಸಿರು ಬಟಾಣಿ ಮತ್ತು ಮೆಕ್ಕೆಜೋಳ)
ನೀರು
ಈರುಳ್ಳಿ
ಹಸಿ ಮೆಣಸಿನಕಾಯಿ
ಜೀರಿಗೆ
ತುಪ್ಪ ಅಥವಾ ಎಣ್ಣೆ
ಉಪ್ಪು
ಇದನ್ನೂ ಓದಿ:
ಮಾಡುವ ವಿಧಾನ:
ಒಂದು ದಪ್ಪ ತಳದ ಪಾತ್ರೆಗೆ 2 ಕಪ್ ನೀರು ಹಾಕಿ ಕಾಯಲು ಇಡಬೇಕು. ನಂತರ ಅದಕ್ಕೆ ಹೆಚ್ಚಿದ ಕ್ಯಾರೆಟ್, ಬೀನ್ಸ್, ಬಟಾಣಿ, ಈರುಳ್ಳಿ, ಹಸಿರು ಮೆಣಸಿನಕಾಯಿ, ಜೀರಿಗೆ, ಉಪ್ಪು ಮತ್ತು 1 ಚಮಚ ತುಪ್ಪ ಸೇರಿಸಿ. ಮುಚ್ಚಳ ಮುಚ್ಚಿ ತರಕಾರಿಗಳು ಮುಕ್ಕಾಲು ಭಾಗ ಬೇಯುವವರೆಗೆ ಮಧ್ಯಮ ಉರಿಯಲ್ಲಿ ಕುದಿಸಬೇಕು. ನೀರು ಚೆನ್ನಾಗಿ ಕುದಿಯುವಾಗ, 1ಚಮಚ ರಾಗಿ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕಲಸಿ ಕುದಿಯುವ ನೀರಿಗೆ ಹಾಕಬೇಕು. ನಂತರ ಉಳಿದ ರಾಗಿ ಹಿಟ್ಟನ್ನು ಕುದಿಯುವ ನೀರಿನ ಮಧ್ಯಭಾಗದಲ್ಲಿ ಹಾಕಿ, ಮುಚ್ಚಳ ಮುಚ್ಚಿ 3 ನಿಮಿಷ ಹಾಗೇ ಬೇಯಲು ಬಿಡಬೇಕು. ಇದರಿಂದ ಹಿಟ್ಟು ಹಬೆಯಲ್ಲೇ ಚೆನ್ನಾಗಿ ಬೇಯುತ್ತದೆ.
ನಿಮಿಷಗಳ ನಂತರ ಮುದ್ದೆ ಕೋಲು ಅಥವಾ ದಪ್ಪನೆಯ ಚಮಚದ ಹಿಂಭಾಗವನ್ನು ಬಳಸಿ ಹಿಟ್ಟನ್ನು ನೀರಿನೊಂದಿಗೆ ಗಂಟಿಲ್ಲದಂತೆ ವೇಗವಾಗಿ ಮತ್ತು ಚೆನ್ನಾಗಿ ಒಟ್ಟಿಗೆ ಸೇರಿಸಿ. ಮಿಶ್ರಣವು ಪಾತ್ರೆಯ ತಳ ಬಿಟ್ಟು ಮುದ್ದೆಯ ಹದಕ್ಕೆ ಬರುವವರೆಗೆ ಸಣ್ಣ ಉರಿಯಲ್ಲಿ ಮತ್ತೊಂದು ನಿಮಿಷ ಬೇಯಿಸಿ ಗ್ಯಾಸ್ ಆಫ್ ಮಾಡಿ. ಕೈಗೆ ಸ್ವಲ್ಪ ನೀರು ಅಥವಾ ತುಪ್ಪ ಸವರಿಕೊಂಡು, ಬಿಸಿ ಇರುವಾಗಲೇ ಹಿಟ್ಟನ್ನು ಪ್ಲೇಟ್ ಅಥವಾ ಮರದ ಮಣೆಯ ಮೇಲೆ ತೆಗೆದುಕೊಂಡು ದುಂಡಗಿನ ಆಕಾರಕ್ಕೆ ಉಂಡೆ ಕಟ್ಟಿದರೆ ಬಿಸಿಬಿಸಿ ಮತ್ತು ಪೌಷ್ಟಿಕಾಂಶಯುಕ್ತ ತರಕಾರಿ ರಾಗಿ ಮುದ್ದೆ ಸವಿಯಲು ಸಿದ್ಧ.



