June 20, 2026
Saturday, June 20, 2026
spot_img

HEALTHY | ಆಫೀಸ್ ಕೆಲಸ ಮುಗಿದು ಸುಸ್ತಾಗಿದ್ದೀರಾ? ಕೇವಲ 15 ನಿಮಿಷಗಳಲ್ಲಿ ಸಿದ್ಧವಾಗುತ್ತೆ ಸೂಪರ್ ಡಿನ್ನರ್ ಪನೀರ್ ಪರಾಠ!

ಆಫೀಸ್ ಕೆಲಸ ಅಥವಾ ದಿನದ ಧಾವಂತದ ಮುಗಿದ ನಂತರ ರಾತ್ರಿ ಅಡುಗೆ ಮನೆಗೆ ಹೋಗಿ ದೀರ್ಘಕಾಲ ಕೆಲಸ ಮಾಡಲು ಯಾರಿಗೂ ಇಷ್ಟವಿರುವುದಿಲ್ಲ. ಅಂತಹ ಸುಸ್ತಾದ ದಿನಗಳಲ್ಲಿ ಹೊರಗಿನಿಂದ ಜಂಕ್ ಫುಡ್ ಆರ್ಡರ್ ಮಾಡುವ ಬದಲಿಗೆ, ಕೇವಲ 15 ನಿಮಿಷಗಳಲ್ಲಿ ಈ ಪನೀರ್ ಪರಾಠ ಮಾಡಬಹುದು. ಇದನ್ನು ಬ್ಯಾಚುಲರ್ಸ್ ಕೂಡ ಅತ್ಯಂತ ಸುಲಭವಾಗಿ ಸಿದ್ಧಪಡಿಸಬಹುದು.

ಬೇಕಾಗುವ ಸಾಮಗ್ರಿಗಳು:

ಗೋಧಿ ಹಿಟ್ಟು

ಉಪ್ಪು

ಎಣ್ಣೆ ಅಥವಾ ತುಪ್ಪ

ನೀರು

ತುರಿದ ಪನೀರ್

ಈರುಳ್ಳಿ

ಹಸಿಮೆಣಸಿನಕಾಯಿ

ಕೊತ್ತಂಬರಿ ಸೊಪ್ಪು

ಶುಂಠಿ ಪೇಸ್ಟ್

ಅಚ್ಚ ಖಾರದ ಪುಡಿ

ಗರಂ ಮಸಾಲಾ ಪುಡಿ

ಜೀರಿಗೆ ಪುಡಿ

ಆಮ್‌ಚೂರ್ ಪುಡಿ ಅಥವಾ ನಿಂಬೆರಸ

ಇದನ್ನೂ ಓದಿ:

ಮಾಡುವ ವಿಧಾನ

ಮೊದಲು ಗೋಧಿ ಹಿಟ್ಟಿಗೆ ಉಪ್ಪು, ಸ್ವಲ್ಪ ನೀರು ಮತ್ತು ಒಂದು ಚಮಚ ಎಣ್ಣೆ ಹಾಕಿ ಚಪಾತಿ ಹಿಟ್ಟಿನಂತೆ ಮೃದುವಾಗಿ ಕಲಸಿ 15 ನಿಮಿಷ ನೆನೆಯಲು ಬಿಡಬೇಕು.ನಂತರ ಒಂದು ಬೌಲ್‌ನಲ್ಲಿ ತುರಿದ ಪನೀರ್, ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು, ಖಾರದ ಪುಡಿ ಮತ್ತು ಗರಂ ಮಸಾಲಾ ಹಾಕಿ ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿ. ನಂತರ ಕಲಸಿದ ಹಿಟ್ಟಿನ ಉಂಡೆಯನ್ನು ಸಣ್ಣ ಪೂರಿಯಂತೆ ಲಟ್ಟಿಸಿ. ಅದರ ಮಧ್ಯದಲ್ಲಿ ಪನೀರ್ ಹೂರಣವನ್ನು ಇಟ್ಟು, ಅಂಚುಗಳನ್ನು ಮುಚ್ಚಿ, ಒಣ ಹಿಟ್ಟು ಹಾಕಿ ಮೃದುವಾಗಿ ಲಟ್ಟಿಸಿ, ಕಾದ ಹಂಚಿನ ಮೇಲೆ ಪರಾಠವನ್ನು ಹಾಕಿ, ಎರಡೂ ಬದಿಗಳಿಗೆ ತುಪ್ಪ ಅಥವಾ ಬೆಣ್ಣೆ ಸವರಿ, ಕಂದು ಚುಕ್ಕೆಗಳು ಬರುವವರೆಗೆ ಮಧ್ಯಮ ಉರಿಯಲ್ಲಿ ಗರಿಗರಿಯಾಗಿ ಬೇಯಿಸಿದರೆ ಪನೀರ್ ಪರಾಠ ಸಿದ್ದ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !