October 8, 2026
Thursday, October 8, 2026
spot_img

HEALTH | ಬೆಳಗ್ಗೆ ಏಳುವಾಗ ಮಾಡುವ ಈ ಕೆಲಸದಿಂದಾಗಿ ಹೃದಯಾಘಾತದ ಸಂಭವ, ಶೇ.90ರಷ್ಟು ಎಲ್ರೂ ಮಾಡ್ತಾರೆ ಈ ತಪ್ಪು!

ಎಷ್ಟೋ ಮಂದಿ ಬೆಳಗ್ಗೆ ಒಂದು ತಪ್ಪನ್ನು ಮಾಡುತ್ತಾರೆ. ಇದು ಮಾಮೂಲಿಯಾಗಿ ಪ್ರತೊಯೊಬ್ಬರೂ ಮಾಡುವಂತಹ ತಪ್ಪು. ಈ ರೀತಿ ಮಾಡೋದ್ರಿಂದ ಹೃದಯಾಘಾತದ ಸಾಧ್ಯತೆ ಇರುತ್ತದೆ. ಬೆಳಗ್ಗೆ ಎದ್ದ ತಕ್ಷಣ ನೀವೇನು ಮಾಡ್ತೀರಿ? ಹೇಗೆ ಎದ್ದೇಳ್ತೀರಿ? ಯೋಚಿಸಿ..

ಬೆಳಗ್ಗೆ ಎಚ್ಚರ ಆದಾಗ ರಪ್‌ ಎಂದು ಎದ್ದು ಓಡಾಡುವುದು, ಅಲಾರಂ ಸದ್ದಿಗೆ ಪಟ್‌ ಎಂದು ಎದ್ದು ಕೂರುವುದನ್ನು ಇಂದೇ ನಿಲ್ಲಿಸಿ. ಪ್ರತಿಯೊಬ್ಬರು ಎಚ್ಚರ ಆದ ತಕ್ಷಣ ತಮ್ಮ ಬೆಡ್‌ನಿಂದ ಹೊರಕ್ಕೆ ಹೋಗುವ ತವಕದಲ್ಲಿ ಇರುತ್ತಾರೆ. ಇದರ ಜೊತೆಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು, ಬೆಳಗ್ಗೆ ಎದ್ದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಏನಿದೆ ಎಂದು ಚೆಕ್‌ ಮಾಡುವುದು ಕೆಟ್ಟ ಅಭ್ಯಾಸವಾಗಿದೆ. ಹಲವರಿಗೆ ಖಾಲಿ ಹೊಟ್ಟೆಯಲ್ಲಿ ಸಿಗರೇಟ್‌ ಸೇದುವ ಅಭ್ಯಾಸ ಕೂಡ ಇರುತ್ತದೆ. ಇದೆಲ್ಲವನ್ನೂ ಇಂದೇ ನಿಲ್ಲಿಸಿ..

ಏನು ಮಾಡಬಹುದು?

ಬೆಳಗ್ಗೆ ಎಚ್ಚರವಾದ ನಂತರ ಕಣ್ಣು ಬಿಟ್ಟು ಐದು ನಿಮಿಷ ರಿಲ್ಯಾಕ್ಸ್‌ ಮಾಡಿ. ಐದು ನಿಮಿಷ ನಿಮ್ಮ ದೇಹ ಎದ್ದೇಳಲು ಸಮಯ ನೀಡಿ. ರಾತ್ರಿಯಿಡೀ ರೆಸ್ಟ್‌ ಮಾಡಿದ ನಂತರ ದೇಹದ ಎಲ್ಲ ಅಂಗಗಳು ಏಳುವ ಸಮಯದಲ್ಲಿ ರೆಸ್ಟ್‌ನಲ್ಲಿಯೇ ಇರುತ್ತವೆ. ನೀವು ಸಡನ್‌ ಆಗಿ ಎದ್ದು ಕೂತಾಗ ನಿಮ್ಮ ಹೃದಯಕ್ಕೆ ಎಲ್ಲ ಅಂಗಗಳ ಪ್ರೆಶರ್‌ ಬೀಳುತ್ತದೆ. ಇದರಿಂದ ಹೃದಯಕ್ಕೆ ಹೆಚ್ಚು ಕೆಲಸ ನೀಡಿದಂತಾಗುತ್ತದೆ.

ಏದ್ದ ನಂತರ ಖಾಲಿ ಹೊಟ್ಟೆಗೆ ಅರ್ಧ ಲೀಟರ್‌ ನೀರು ಕುಡಿಯಿರಿ, ಸಾಧ್ಯವಾದರೆ ಧ್ಯಾನ, ವ್ಯಾಯಾಮದತ್ತ ಮನಸ್ಸನ್ನು ಹರಿಸಿ. ಫೋನ್‌ನಿಂದ ದೂರವೇ ಇರಿ. ಎಷ್ಟೇ ಮುಖ್ಯವಾದ ಅಪ್ಡೇಟ್‌ ಇದ್ದರೂ ಆಫೀಸ್‌ಗೆ ಹೋಗುವವರೆಗೂ ಬೆಳ್ಳಂಬೆಳಗ್ಗೆ ನಿಮಗೆ ಏನೂ ಮಾಡೋಕೆ ಆಗೋದಿಲ್ಲ. ಇನ್ನು ಬೇರೆ ರೀತಿಯ ಫ್ಯಾಮಿಲಿ ಎಮರ್ಜೆನ್ಸಿ ಇದ್ದರೆ ಯಾರೂ ಮೆಸೇಜ್‌ ಮಾಡೋದಿಲ್ಲ. ಕಾಲ್‌ ಮಾಡ್ತಾರೆ.

Must Read