ಹೊಸದಿಗಂತ ವರದಿ ಕಲಬುರಗಿ:
ಕರ್ನಾಟಕ ವಿಧಾನ ಪರಿಷತ್ನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆಯವರೆಗೆ ಒಟ್ಟು ಶೇ.69.83ರಷ್ಟು ಮತದಾನವಾಗಿದೆ.
ಕ್ಷೇತ್ರದ ಒಟ್ಟು 34,784 ಮತದಾರರ ಪೈಕಿ 24,289 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇವರಲ್ಲಿ 14,567 ಪುರುಷರು ಹಾಗೂ 9,722 ಮಹಿಳಾ ಮತದಾರರಿದ್ದಾರೆ.
ಜಿಲ್ಲಾವಾರು ವಿವರ
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 10,652 ಮತದಾರರ ಪೈಕಿ 7,106 ಮಂದಿ ಮತ ಚಲಾಯಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ 4,511 ಮತದಾರರ ಪೈಕಿ 3,107 ಮಂದಿ, ರಾಯಚೂರು ಜಿಲ್ಲೆಯಲ್ಲಿ 5,402 ಮತದಾರರ ಪೈಕಿ 3,874 ಮಂದಿ ಮತ ಚಲಾಯಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ 3,393 ಮತದಾರರ ಪೈಕಿ 2,333 ಮಂದಿ, ವಿಜಯನಗರ ಜಿಲ್ಲೆಯಲ್ಲಿ 3,326 ಮತದಾರರ ಪೈಕಿ 2,574 ಮಂದಿ, ಯಾದಗಿರಿ ಜಿಲ್ಲೆಯಲ್ಲಿ 2,259 ಮತದಾರರ ಪೈಕಿ 1,771 ಮಂದಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 2,714 ಮತದಾರರ ಪೈಕಿ 2,120 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮಧ್ಯಾಹ್ನ 2 ಗಂಟೆಯವರೆಗಿನ ಅಂಕಿ-ಅಂಶಗಳ ಪ್ರಕಾರ, ವಿಜಯನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರು ಮತ ಚಲಾಯಿಸಿದ್ದಾರೆ.ಕ್ಷೇತ್ರದಾದ್ಯಂತ ಮತದಾನ ಪ್ರಕ್ರಿಯೆ ಮುಂದುವರಿದಿದೆ.



