Wednesday, September 28, 2022

Latest Posts

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ 14 ಚಕ್ರದ ಲಾರಿ!

ಹೊಸದಿಗಂತ ವರದಿ, ಯಲ್ಲಾಪುರ:
ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಬಿಸಗೋಡ ಕ್ರಾಸ್ ಬಳಿ 14 ಚಕ್ರದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಬಿಸಗೋಡ ಕ್ರಾಸ ಬಳಿ ಸ್ಮಶಾನದ ಹತ್ತಿರ ಆಂದ್ರ ಪ್ರದೇಶ ದ ನೋಂದಣಿ ಯಿರುವ 14 ಚಕ್ರದ ಲಾರಿ ಯಲ್ಲಿ ಮ್ಯಾಗ್ನಿಸ್ ತುಂಬಿಕೊಂಡು ಕಾರವಾರ ಕಡೆಗೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕಿಳಿದಿದೆ. ಲಾರಿಯ ಮುಂಭಾಗ ಚಕ್ರ ಗಳು ಕಳಚಿಕೊಂಡು, ಸಂಪೂರ್ಣ ಜಾಖಂಗೊಂಡಿದೆ. ಅದೃಷ್ಟವಶಾತ್ ಚಾಲಕ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!