ಪೂರ್ವ ಅಮೆರಿಕದಲ್ಲಿ ಭಾರೀ ಹಿಮಪಾತ: 95 ಸಾವಿರ ಮನೆಗಳಿಗೆ ಕರೆಂಟ್ ಇಲ್ಲ, ತುರ್ತು ಪರಿಸ್ಥಿತಿ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಬಲವಾದ ಶೀತಗಾಳಿಯಿಂದ ಪೂರ್ವ ಅಮೆರಿಕ ನಡುಗುತ್ತಿದ್ದು, ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಚಳಿಗಾಲದ ಚಂಡಮಾರುತದಿಂದ ಸುಮಾರು ಏಳು ಕೋಟಿ ಜನರು ವಾಸಿಸುವ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕದಲ್ಲಿ ವ್ಯಾಪಕ ವ್ಯತ್ಯಯ ಕಂಡುಬಂದಿದೆ.

ನ್ಯೂಯಾರ್ಕ್ ಮತ್ತು ಬೋಸ್ಟನ್‌ನಂತಹ ಪ್ರಮುಖ ನಗರಗಳು ಹಿಮಪಾತಕ್ಕೆ ತುತ್ತಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ನ್ಯೂಯಾರ್ಕ್‌ನ ಮ್ಯಾಸಚೊಸೆಟ್ಸ್ ರಾಜ್ಯಗಳು ಅತಿ ಹೆಚ್ಚು ಹಾನಿಗೊಳಗಾಗಿದ್ದು, ಮನೆಯಿಂದ ಹೊರಬಾರದ ಪರಿಸ್ಥಿತಿಯಲ್ಲಿ ಜನರು ಇದ್ದಾರೆ.

ಈ ಪ್ರದೇಶಗಳಲ್ಲಿ ಸುಮಾರು ಎರಡು ಅಡಿಯಷ್ಟು ಹಿಮ ಬಿದ್ದಿದೆ. ಇದರಿಂದಾಗಿ ೯೫ ಸಾವಿರಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಪೂರ್ವ ಅಮೆರಿಕದ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!