Tuesday, August 16, 2022

Latest Posts

ಅರಬ್ಬೀ ಸಮುದ್ರದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬೈನಲ್ಲಿರುವ ONGC ರಿಗ್ ಸಾಗರ್ ಕಿರಣ್ ಬಳಿ ಅರಬ್ಬೀ ಸಮುದ್ರದಲ್ಲಿ ಹೆಲಿಕಾಪ್ಟರ್ ಮಂಗಳವಾರ ಮಧ್ಯಾಹ್ನ ತುರ್ತು ಭೂಸ್ಪರ್ಶ ಮಾಡಿದ್ದು, ಸಧ್ಯ ಎಲ್ಲಾ ಒಂಬತ್ತು ಜನರನ್ನ ರಕ್ಷಿಸಲಾಗಿದೆ.
ಏಳು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಳನ್ನ ಹೊತ್ತಿದ್ದ ಹೆಲಿಕಾಪ್ಟರ್ ಸಂಚಾರದ ವೇಳೆ ತುರ್ತು ಭೂಸ್ಪರ್ಶ ಮಾಡಿದೆ.
ಟ್ವೀಟ್ ಮಾಡಿದ್ದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ಒಎನ್ಜಿಸಿ), ‘7 ಪ್ರಯಾಣಿಕರು ಮತ್ತು 2 ಪೈಲಟ್ಗಳನ್ನ ಹೊತ್ತ ಹೆಲಿಕಾಪ್ಟರ್ ಮುಂಬೈ ಹೈನ ಒಎನ್ಜಿಸಿ ರಿಗ್ ಸಾಗರ್ ಕಿರಣ್ ಬಳಿ ಅರಬ್ಬಿ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ನಾಲ್ವರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ‘ ಎಂದಿತ್ತು. ಸದ್ಯ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಇಬ್ಬರು ಪೈಲಟ್‌ ಸೇರಿ ಎಲ್ಲ ಪ್ರಯಾಣಿಕರನ್ನ ರಕ್ಷಿಸಲಾಗಿದೆ.
ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶಕ್ಕೆ ಕಾರಣಗಳು ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss