ಅಡುಗೆ ಮನೆಯಲ್ಲಿ ಕೆಲಸ ಸುಲಭ ಮಾಡೋಕೆ ಬೇಕಾದ 10 ಟಿಪ್ಸ್ ಇಲ್ಲಿದೆ ನೋಡಿ..

ಅಡುಗೆ ಮಾಡುವುದು, ಅಡುಗೆ ಮನೆ ನಿಭಾಯಿಸುವುದು ಒಂದು ಕಲೆ. ಅಡುಗೆ ಮನೆ ಶುಚಿಯಾಗಿಲ್ಲ ಎಂದರೆ ಇಡೀ ಮನೆಯೇ ಶುಚಿಯಾಗಿಲ್ಲ ಎಂದು ಅರ್ಥ. ಅಡುಗೆ ಮನೆಯಲ್ಲಿ ಕೆಲವೊಂದು ಸರಳ ಸಮಸ್ಯೆ ಎದುರಾಗುತ್ತದೆ. ಅದಕ್ಕೆ ಸಮಾಧಾನ ಇಲ್ಲಿದೆ… ನಿಮಗಾಗಿ ಹತ್ತು ಟಿಪ್ಸ್..

  1. ಟೀ ಕುದಿಯಲು ಇಟ್ಟು ಹೋದಾಗ ಟೀ ಉಕ್ಕಿಹೋಗಬಾರದೆಂದರೆ ಟೀ ಪಾತ್ರೆಯೊಳಗೆ ಸ್ಪೂನ್ ಹಾಕಿ, ಇಲ್ಲವೇ ಮರದ ಚಮಚ ಪಾತ್ರೆ ಅಡ್ಡ ಇಡಿ, ಹಾಲು ಕಾಯಿಸುವಾಗಲೂ ಇದು ಅನ್ವಯವಾಗುತ್ತದೆ.
  2. ಅಡುಗೆ ಮಾಡುವಾಗ ಟೊಮ್ಯಾಟೊ ಬೇಗ ಬೇಯಲು ಟೊಮ್ಯಾಟೊ ನಂತರ ಅರಿಶಿಣ ಹಾಕಿ ದೊಡ್ಡ ಉರಿಯಲ್ಲಿ ಆಡಿಸಿ.
  3. ರಾಗಿ ಮುದ್ದೆ ಅಥವಾ ಉಪ್ಪಿಟ್ಟು ಮಾಡುವಾಗ ನೀರು ಕಡಿಮೆಯಾಯ್ತು ಎಂದು ತಣ್ಣೀರನ್ನು ಹಾಕದಿರಿ, ಇದಕ್ಕೆ ಬಿಸಿನೀರನ್ನೇ ಹಾಕಬೇಕು.
  4. ನಿಂಬೆಹಣ್ಣಿನ ಜ್ಯೂಸ್ ಕಹಿಯಾಗುತ್ತಿದೆ ಎಂದರೆ ಕೈಯಿಂದ ನಿಂಬೆಹಣ್ಣು ಹಿಂಡಬೇಡಿ, ಮಶೀನ್‌ನಿಂದ ಹಿಂಡಿ.
  5. ನಾನ್‌ವೆಜ್ ಅಡುಗೆ ಮಾಡುವಾಗ ಉಪ್ಪು ಹಾಗೂ ಅರಿಶಿಣ ಹಾಕಿ, ಎಣ್ಣೆಯಲ್ಲಿ ಚಿಕನ್ ಅಥವಾ ಮಟನ್ ಚೆನ್ನಾಗಿ ಹುರಿದುಕೊಂಡು ನಂತರ ಉಳಿದ ಮಸಾಲಾ ಹಾಕಿ, ಇದು ವಾಸನೆ ಬರುವುದನ್ನು ತಪ್ಪಿಸುತ್ತದೆ.
  6. ಎಗ್ ಬುರ್ಜಿ ಮಾಡುವಾಗ ಮೊಟ್ಟೆ ದಪ್ಪ ಪೀಸ್ ಸಿಗಬೇಕಾದರೆ ಮೊಟ್ಟೆ ಹೊಡೆದು ಸಣ್ಣ ಉರಿಯಲ್ಲಿ ಬಿಟ್ಟು ಆಗಾಗ ಮಾತ್ರ ಕೈ ಆಡಿಸಿ.
  7. ಉದುರುದುರಾದ ಅನ್ನ ಆಗಬೇಕೆಂದರೆ ಕುಕ್ಕರ್ ವಿಶಲ್ ಹಾಕುವ ಮುನ್ನ ನಿಂಬೆರಸ ಅಥವಾ ಕೊಬ್ಬರಿ ಎಣ್ಣೆ ಹನಿ ಹಾಕಿ.
  8. ಸಕ್ಕರೆಯಲ್ಲಿ ಹುಳ, ಇರುವೆ ಬರಬಾರದು ಎಂದರೆ ಏಲಕ್ಕಿ ಹಾಕಿ ಇಡಿ
  9. ಕಪ್ಪಾದ ಸ್ಟೀಲ್ ಪಾತ್ರೆ ಅಥವಾ ಗ್ಯಾಸ್‌ಸ್ಟೊವ್‌ನ ಮಧ್ಯಭಾಗ ಕಪ್ಪಗಿದ್ದರೆ ಅದಕ್ಕೆ ಈನೋ ಹಾಗೂ ನಿಂಬೆರಸ ಹಾಕಿ ಐದು ನಿಮಿಷ ಬಿಟ್ಟು ತೊಳೆಯಿರಿ.
  10. ಕುಕ್ಕರ್ ಸರಿಯಿಲ್ಲದೆ ನೀರು ಹೊರಬರುತ್ತಿದ್ದರೆ, ಆಹಾರದ ಜೊತೆ ಒಂದು ಸ್ಪೂನ್ ಹಾಕಿಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!