HEALTH| ದೇಹದ ಅಧಿಕ ಉಷ್ಣತೆ ಕಡಿಮೆ ಮಾಡುವ ನೈಸರ್ಗಿಕ ಪಾನೀಯಗಳಿವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಸಿಲಿನ ತಾಪಕ್ಕೆ ಕೆಲವರ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಅನೇಕರಿಗೆ ತಲೆಸುತ್ತು, ದೇಹದಲ್ಲಿ ಉಷ್ಣತೆ ಹೆಚ್ಚುವುದು ಹೀಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಆದ್ದರಿಂದ ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಕೆಲವೊಂದು ಆಹಾರಗಳು, ಪಾನೀಯಗಳನ್ನು ಬೇಸಿಗೆಯ ಕಾಲದಲ್ಲಿ ಸೇವಿಸುವುದರಿಂದ ದೇಹವನ್ನು ತಂಪಾಗಿಡುವಲ್ಲಿ ಸಹಕಾರಿಯಾಗಿದೆ. ಒಂದು ವೇಳೆ ದೇಹದ ಉಷ್ಣತೆ ಹೆಚ್ಚಾಗಿದ್ದರೆ ಈ ಕೆಳಗಿನ ಪಾನೀಯಗಳನ್ನು ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆಯಾದೀತು.

1. ಎಳನೀರನ್ನು ಕುಡಿಯಿರಿ:

ಬೇಸಿಗೆಯಲ್ಲಿ ಆದಷ್ಟು ಎಳನೀರನ್ನು ಕುಡಿಯಿರಿ. ಇದು ಶರೀರಕ್ಕೆ ತಂಪು, ಇದರಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ.

2. ಬಾರ್ಲಿ ನೀರನ್ನು ಕುಡಿಯಿರಿ:

ಬಾರ್ಲಿಯನ್ನು ನೀರಿನಲ್ಲಿ ಕುದಿಸಿ ತಣ್ಣಗಾದ ಬಳಿಕ ಕುಡಿಯಿರಿ. ಹೀಗೆ ಮಾಡಿದಲ್ಲಿ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ.

3. ಮೆಂತೆ ನೆನೆಸಿದ ನೀರು:

ಮೆಂತೆಕಾಳುಗಳನ್ನು ನೀರಿನಲ್ಲಿ ನೆನೆಸಿಟ್ಟು ಕುಡಿಯಿರಿ.

4. ಕಲ್ಲಂಗಡಿ ಹಣ್ಣು ಜ್ಯೂಸ್: ‌

ಕಲ್ಲಂಗಡಿ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆಯಾಗಲು ಸಹಾಯವಾಗುತ್ತದೆ.

5. ನೀರನ್ನು ಧಾರಾಳವಾಗಿ ಕುಡಿಯಿರಿ:

ನೀರನ್ನು ಕುಡಿದಷ್ಟೂ ನಿಮ್ಮ ಶರೀರವು ಹೆಚ್ಚು ಉಷ್ಣಾಂಶವನ್ನು ಹೊರಹಾಕುತ್ತದೆ. ಆಗ ಬಿಸಿಲ ತಾಪಕ್ಕೆ ಶರೀರವು ಆಯಾಸಗೊಳ್ಳುವುದಿಲ್ಲ. ನೀವು ಪ್ರತಿದಿನವೂ ಕನಿಷ್ಟ ಪಕ್ಷ ಎಂಟು ಲೋಟಗಳಷ್ಟಾದರೂ ನೀರನ್ನು ಕುಡಿಯಲೇಬೇಕು.

6. ಏಲಕ್ಕಿ ತ೦ಪು:

ಏಲಕ್ಕಿ ಎಸಳೊಂದನ್ನು ತೆಗೆದುಕೊಂಡು ಅದನ್ನು ಎರಡು ಲೋಟಗಳಷ್ಟು ನೀರಿನಲ್ಲಿ ಕುದಿಸಿ, ಬಳಿಕ ನೀರನ್ನು ಸೋಸಿ ಆ ನೀರನ್ನು ತಣ್ಣಗಾಗಿಸಿರಿ. ನಿಮ್ಮ ಶರೀರದ ಉಷ್ಣಾ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ನೀರನ್ನು ನಿಯಮಿತವಾಗಿ ಕುಡಿಯಿರಿ.

7. ಪುದೀನಾ ಜ್ಯೂಸ್:

ಬೇಸಿಗೆಗೆ ಈ ಪೇಯ ಹೇಳಿ ಮಾಡಿಸಿದಂತಿದ್ದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!