ಸಾಮಾಗ್ರಿಗಳು
ನೂಡಲ್ಸ್
ಕೋಸು
ಕ್ಯಾರೆಟ್
ಬೀನ್ಸ್
ಟೊಮ್ಯಾಟೊ ಕೆಚಪ್
ಸೋಯಾ ಸಾಸ್
ಚಿಲ್ಲಿ ಸಾಸ್
ಹಸಿಮೆಣಸು
ಚಿಕನ್
ಉಪ್ಪು
ಖಾರದಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಚಿಕನ್ ಹಾಕಿ ಬಾಡಿಸಿ
ಇದಕ್ಕೆ ಉಪ್ಪು ಹಾಗೂ ಖಾರದಪುಡಿ, ಅರಿಶಿಣ ಹಾಕಿ ಬೇಯಿಸಿ
ನಂತರ ಇನ್ನೊಂದು ಬಾಣಲೆಗೆ ಎಣ್ಣೆ ಈರುಳ್ಳಿ, ಹಸಿಮೆಣಸು, ಕ್ಯಾರೆಟ್, ಕೋಸು, ಬೀನ್ಸ್ ಹಾಕಿ ಬಾಡಿಸಿ
ನಂತರ ಗರಂ ಮಸಾಲಾ, ಸೋಯಾ ಸಾಸ್, ಟೊಮ್ಯಾಟೊ ಸಾಸ್ ಹಾಗೂ ಚಿಲ್ಲಿ ಸಾಸ್ ಹಾಕಿ
ನಂತರ ಅದಕ್ಕೆ ಚಿಕನ್ ಹಾಕಿ
ನಂತರ ನೂಡಲ್ಸ್ ಹಾಕಿ ಉಪ್ಪು ಹಾಕಿ ಬಾಡಿಸಿದ್ರೆ ಚಿಕನ್ ಚೌಮಿನ್ ರೆಡಿ