ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ರಾಜ್ಮಾ
ಈರುಳ್ಳಿ
ಶುಂಠಿ
ಬೆಳ್ಳುಳ್ಳಿ
ಟೊಮೆಟೊ
ಜೀರಿಗೆ
ಉಪ್ಪು
ನೀರು
ಎಣ್ಣೆ
ಮಾಡುವ ವಿಧಾನ:
* ರಾಜ್ಮಾವನ್ನು 4-5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
* ನಂತರ ಕುಕ್ಕರ್ ನಲ್ಲಿ ಹಾಕಿ 2 ಕಪ್ ನೀರು, ಉಪ್ಪು ಸೇರಿಸಿ 3 ವಿಶಲ್ ಬರುವವರೆಗೆ ಬೇಯಿಸಿ.
* ಈಗ ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.
* ನಂತರ ಟೊಮೆಟೊ ಹಾಕಿ ಹುರಿಯಿರಿ, ಈಗ ಜೀರಿಗೆ, ಗರಂ ಮಸಾಲ, ಉಪ್ಪು ಹಾಕಿ ಹುರಿಯಿರಿ.
* ಈಗ ಬೇಯಿಸಿದ ರಾಜ್ಮಾ ಹಾಕಿ ಮಿಕ್ಸ್ ಮಾಡಿ 10 ನಿಮಿಷ ಬೇಯಿಸಿದರೆ ರಾಜ್ಮಾ ಗ್ರೇವಿ ಸವಿಯಲು ಸಿದ್ಧ.