ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆಯಷ್ಟೇ ವಿರಾಟ್ ಕೋಹ್ಲಿ-ಅನುಷ್ಕಾ ಶರ್ಮಾ ಮಗಳು ವಮಿಕಾ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ.
ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ಇರುವ ಕಾರಣ ವಿರಾಟ್ ಕೋಹ್ಲಿ ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ವಮಿಕಾ ಹಾಗೂ ಅನುಷ್ಕಾ ಕೂಡ ಅಲ್ಲಿಗೇ ಬಂದಿದ್ದು, ಅದ್ಧೂರಿಯಾಗಿ ಮಗಳ ಬರ್ಥ್ ಡೇ ಮಾಡಿದ್ದಾರೆ. ವಮಿಕಾಗೆ ಒಂದು ವರ್ಷವಾದರೂ ಈಗಲೂ ಆಕೆ ನೋಡೋಕೆ ಹೇಗಿದ್ದಾಳೆ ಎಂದು ಯಾರಿಗೂ ಗೊತ್ತಿಲ್ಲ. ವಿರಾಟ್ ಹಾಗೂ ಅನುಷ್ಕಾ ವಮಿಕಾಳ ಮುಖ ತೋರಿಸಲು ಇನ್ನೂ ಮನಸ್ಸು ಮಾಡಿಲ್ಲ.
ವಮಿಕಾ ಹಾಗೂ ಅನುಷ್ಕಾ ಇಬ್ಬರೂ ಬಿಳಿ ಬಣ್ಣದ ಬಟ್ಟೆ ತೊಟ್ಟಿರುವ ಫೋಟೊವನ್ನು ಅನುಷ್ಕಾ ಶೇರ್ ಮಾಡಿದ್ದಾರೆ. ಇಷ್ಟು ಬೇಗ ವಮಿಕಾಗೆ ಒಂದು ವರ್ಷ ಎಂದು ನಂಬೋಕೆ ಆಗುತ್ತಿಲ್ಲ ಎಂದು ಅನುಷ್ಕಾ ಹೇಳಿದ್ದಾರೆ.