HEALTH| ಸಿಹಿ ಗೆಣಸು ತಿನ್ನೋದ್ರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿಹಿ ಗೆಣಸು ತಿನ್ನುವುದರಿಂದ ಆರೋಗ್ಯಕ್ಕೆ ಒಳಿತು ಎಂದು ಕೇಳಿರುತ್ತೇವೆ ಆದರೆ ಏನೆಲ್ಲಾ ಲಾಭಗಳಿವೆ ಎಂಬುದು ನಿಮಗೆ ತಿಳಿದಿದ್ಯಾ? ಇಲ್ಲಾಂದ್ರೆ ಇಲ್ಲಿ ತಿಳಿಯಿರಿ.

1. ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ಸಿಹಿ ಆಲೂಗಡ್ಡೆ/ಸಿಹಿ ಗೆಣಸು ಸೇವನೆ ಉತ್ತಮ. ಇದರಿಂದ ಚರ್ಮದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು. ಸಿಹಿ ಗೆಣಸಿನ ಸೇವನೆಯು ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ ಜೊತೆಗೆ ತೇವಾಂಶವನ್ನು ಕೂಡ ನಿಯಂತ್ರಿಸುತ್ತದೆ.

2. ನಿಮ್ಮ ಮನಸ್ಸು ಆರಾಮದಾಯಕವಾಗಿರಲು ಮತ್ತು ನಿಮ್ಮ ಮೇಲಿನ ಒತ್ತಡದ ವಿರುದ್ಧ ಹೋರಾಡುವಂತಹ ಮ್ಯಾಗ್ನಿಷಿಯಂ ಅಂಶವನ್ನು ಹೆಚ್ಚಾಗಿ ಹೊಂದಿರುವ ಸಿಹಿ ಪೊಟ್ಯಾಟೋ ಸೇವನೆ ಮಾಡುವುದು ಒಳ್ಳೆಯದು.

3. ನೈಸರ್ಗಿಕ ಸಕ್ಕರೆ ಅಂಶ ಹೊಂದಿರುವ ಸಿಹಿ ಆಲೂಗಡ್ಡೆ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಕೂಡ ನೀಡುತ್ತದೆ.

4. ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಪೊಟ್ಯಾಶಿಯಂ ಅಂಶ ಅಧಿಕವಾಗಿರುವುದರಿಂದ ಹೃದಯದ ಆರೋಗ್ಯಕ್ಕೂ ಕೂಡ ಇದು ಬಹಳ ಮುಖ್ಯ.

5. ಸಿಹಿ ಆಲೂಗಡ್ಡೆಯಲ್ಲಿ ಬೀಟಾ ಕ್ಯಾರೋಟಿನ್ ಅಂಶವಿದ್ದು, ಇದು ಸ್ತನ ಹಾಗೂ ಅಂಡಾಶಯದ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.

ಇದೀಗ ಸಿಹಿ ಆಲೂಗಡ್ಡೆ/ಸಿಹಿ ಗೆಣಸಿನ ಪ್ರಯೋಜನ ನಿಮಗೆ ತಿಳಿದಿದೆ. ಹಾಗಾದ್ರೆ ತಪ್ಪದೆ ಒಮ್ಮೆಯಾದರೂ ಸಿಹಿ ಗೆಣಸಿನ ಸೇವನೆ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!