Tuesday, March 28, 2023

Latest Posts

ಗ್ರಾಹಕ ಆಯೋಗದಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಇನ್ಶುರೆನ್ಸ್ ಗಳದ್ದೇ ಹೆಚ್ಚು- ಕಾರಣ ಹೀಗಿದೆ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಗ್ರಾಹಕರ ದೂರುಗಳ ಪೈಕಿ ಅತಿ ಹೆಚ್ಚು ಯಾವ ವಿಭಾಗಕ್ಕೆ ಸಂಬಂಧಿಸಿದೆ ಗೊತ್ತಾ ?, ಗ್ರಾಹಕ ಆಯೋಗದ ಮುಂದೆ ಬಾಕಿ ಇರುವ ಪ್ರಕರಣಗಳಲ್ಲಿ ವಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ದೂರುಗಳೇ ಹೆಚ್ಚಿವೆ ಎಂಬ ಅಂಶ ಬೆಳಕಿಗೆ ಬಂದಿದೆ.

ಗ್ರಾಹಕ ಆಯೋಗದ ಮುಂದೆ ಬಾಕಿ ಉಳಿದಿರುವ ಒಟ್ಟು 5,78,061 ಪ್ರಕರಣಗಳಲ್ಲಿ 1,61,134 ವಿಮಾ ಕ್ಷೇತ್ರಕ್ಕೆ ಸಂಬಂಧಿಸಿವೆ ಎಂದು ಕಾರ್ಯದರ್ಶಿ ಶ್ರೀ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.

ವಿಮಾ ಪ್ರಕರಣಗಳನ್ನು ಪ್ರಯಾಣ ವಿಮೆ, ಜೀವ ವಿಮೆ, ಗೃಹ ವಿಮೆ, ಕಾರು ವಿಮೆ, ಸಾಗರ ವಿಮೆ, ಅಗ್ನಿ ವಿಮೆ, ಬೆಳೆ ವಿಮೆ ಮತ್ತು ವೈದ್ಯಕೀಯ ವಿಮೆಯಂತಹ ಹಲವು ವರ್ಗಗಳಾಗಿ ವಿಂಗಡಿಸಲಾಗಿದೆ ಅವುಗಳಲ್ಲಿ ಹೆಚ್ಚಿನ ಪ್ರಕರಣಗಳು ವೈದ್ಯಕೀಯ ವಿಮೆ ಮತ್ತು ಜೀವ ವಿಮೆ ಕ್ಲೈಮ್‌ಗಳಲ್ಲಿ ಕಂಡುಬರುತ್ತವೆ.

ಕ್ಲೈಮ್‌ಗಳನ್ನು ತಿರಸ್ಕರಿಸುವ ಪ್ರಮುಖ ಕಾರಣಗಳು ಇಲ್ಲಿವೆ :

(i) ವಿಮಾ ಒಪ್ಪಂದದಲ್ಲಿ ಅಸ್ಪಷ್ಟತೆ ಅಂದರೆ ತಾಂತ್ರಿಕ ಪರಿಭಾಷೆಗಳು ಮತ್ತು ಸಂಕೀರ್ಣ ಪದಗಳ ಬಳಕೆ ಇರುವ ಸಂದರ್ಭಗಳಲ್ಲಿ ಕ್ಲೈಮ್‌ ತಿರಸ್ಕರಿಸಲಾಗುವುದು.
(ii) ಗ್ರಾಹಕರ ಅರ್ಹತೆ -ಮೊದಲೇ ಅಸ್ತಿತ್ವದಲ್ಲಿರುವ ರೋಗಗಳ ಕಾರಣ ತಿರಸ್ಕರಿಸಲಾಗುತ್ತದೆ.
(iii) ಮಧ್ಯವರ್ತಿಯು ಸಂಪರ್ಕದ ನಿಯಮಗಳನ್ನು ಬಹಿರಂಗಪಡಿಸದ ಕಾರಣ.
(iv) ಪೂರ್ವ ಅಸ್ತಿತ್ವದಲ್ಲಿರುವ ರೋಗಗಳನ್ನು ಹೊರತುಪಡಿಸಿ ಇತರೆ ಸಂದರ್ಭಗಳಲ್ಲೂ ತಿರಸ್ಕರಿಸಲಾಗುತ್ತದೆ.
(v) ಯೋಜನೆಗೆ ಸಂಬಂಧಿಸಿದ ಬೆಳೆ ವಿಮಾ ನಿಯಮಗಳ ಕಾರಣದಿಂದಾಗಿ ಕೂಡ ಕ್ಲೈಮ್‌ ಗಳ ತಿರಸ್ಕಾರ.

ಗ್ರಾಹಕ ಆಯೋಗಗಳಲ್ಲಿ ವಿಮಾ ಪ್ರಕರಣಗಳ ದೊಡ್ಡ ಬಾಕಿಯನ್ನು ಪರಿಹರಿಸಲು, ಗ್ರಾಹಕ ಆಯೋಗಗಳಲ್ಲಿ ವಿಮಾ ಪ್ರಕರಣಗಳ ಬಗ್ಗೆ ಪಾಲುದಾರರ ಸಮಾಲೋಚನೆಯನ್ನು ಸುಲಭಗೊಳಿಸಲು ಇಲಾಖೆಯು ಸಮ್ಮೇಳನವನ್ನು ಆಯೋಜಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!