PHOTO GALLERY| ಅಬ್ಬಬ್ಬಾ…ಭಾರತೀಯರ ಹೆಮ್ಮೆ ಹೊಸ ʻಸಂಸತ್‌ ಭವನʼದ ಲುಕ್‌ ಹೇಗಿದೆ ನೋಡಿ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜನವರಿ 31 ರಂದು ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲೇ ಹೊಸ ಸಂಸತ್ತಿನ ಕಟ್ಟಡ ಉದ್ಘಾಟನೆಯಾಗಲಿದೆ. ಭಾರತ ತನ್ನ 75ನೇ ಸ್ವಾತಂತ್ರ್ಯೋತ್ಸವವನ್ನು ಹೊಸ ಸಂಸತ್‌ ಕಟ್ಟಡದಲ್ಲಿ ಆಚರಿಸುವ ಗುರಿಯನ್ನಿಟ್ಟುಕೊಂಡು 2020 ಡಿಸೆಂಬರ್‌ 10 ರಂದು ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಸಂಸತ್‌ ಭವನದ ಉದ್ಘಾಟನೆಯ ಮಹತ್ವ ದಿನ ತೀರಾ ಹತ್ತಿರದಲ್ಲಿದೆ. ಈ ಭವ್ಯ ಸಮಾರಂಭದಲ್ಲಿ ಎಲ್ಲ ಪಕ್ಷಗಳ ನಾಯಕರು ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದು, ಐತಿಹಾಸಿಕ ಕ್ಷಣಕ್ಕೆ ಆ ದಿನ ಸಾಕ್ಷಿಯಾಗಲಿದೆ.

ತ್ರಿಕೋನ ಆಕಾರದ ರಚನೆಯ ಒಳಭಾಗದ ಫೋಟೋಗಳನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ. ಜನವರಿ 16 ರಂದು ಲೋಕಸಭೆಯ ಚೇಂಬರ್‌ಗೆ ಅಂತಿಮ ಸ್ಪರ್ಶವನ್ನು ನೀಡುತ್ತಿದ್ದಾರೆ, ಕಾರಿಡಾರ್‌ಗಳ ಉದ್ದಕ್ಕೂ ಕಲೆ ಮತ್ತು ಅಂಗಳದಲ್ಲಿ ನಡೆಯುತ್ತಿರುವ ಕೆಲಸಗಳನ್ನು ತೋರಿಸುತ್ತದೆ. ಯೋಜನೆಯು ನವೆಂಬರ್ 2022ಕ್ಕೆ ಮುಗಿಯಬೇಕಿತ್ತು. ಸಚಿವಾಲಯದ ಅಧಿಕಾರಿಗಳು ಈಗ ಜನವರಿ ಅಂತ್ಯದ ವೇಳೆಗೆ ಸಿದ್ಧವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಹೊಸ ಕಟ್ಟಡದಲ್ಲಿ ಬಜೆಟ್ ಅಧಿವೇಶನ ಆರಂಭವಾಗುತ್ತದೆಯೇ ಅಥವಾ ಅಧಿವೇಶನದ ಎರಡನೇ ಭಾಗವನ್ನು ಹೊಸ ಕಟ್ಟಡದಲ್ಲಿ ನಡೆಸಲಾಗುವುದು ಎಂಬುದನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ.

ಹೇಗಿದೆ ನೋಡಿ ಹೊಸ ಸಂಸತ್‌ ಭವನ

new parliament building

New Parliament building

new parliament building

New parliament building

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!