ಇವಿ ಬಿಡಿಭಾಗಗಳ ಉತ್ಪಾದನೆ ಹೆಚ್ಚಿಸಲು 1,500 ಕೋಟಿ ರೂ. ಹೂಡಿಕೆ ಮಾಡಲಿದೆ ಹೀರೋ ಮೋಟರ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಪ್ರಸಿದ್ಧ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಹೀರೋ ಮೋಟರ್ಸ್‌ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಬಿಡಿಭಾಗಗಳ ತಯಾರಿಕೆಯನ್ನು ವಿಸ್ತರಿಸಲು ಮುಂದಿನ ಮೂರು ವರ್ಷಗಳಲ್ಲಿ ರೂ 1,500 ಕೋಟಿ ಹೂಡಿಕೆ ಮಾಡಲು ಯೋಜಿಸುತ್ತಿದೆ. ಭಾರತ ಮತ್ತು ಥೈಲ್ಯಾಂಡ್‌ನಲ್ಲಿ ಹೊಸ ಸೌಲಭ್ಯಗಳನ್ನು ಸ್ಥಾಪಿಸಲು ಕಂಪನಿ ಯೋಚಿಸಿದೆ ಎಂದು ಮೂಲಗಳು ವರದಿ ಮಾಡಿವೆ.

ಹೈ-ಎಂಡ್ ಕಾರುಗಳಿಗೆ ಫೋರ್ಜಿಂಗ್ ಸೌಲಭ್ಯ, ಡಿಸ್ಕ್ ಬ್ರೇಕ್ ಉತ್ಪಾದನಾ ಘಟಕ, ಥೈಲ್ಯಾಂಡ್‌ನಲ್ಲಿ BMW ಗಾಗಿ ಗೇರ್‌ಬಾಕ್ಸ್‌ಗಳನ್ನು ತಯಾರಿಸುವ ಹೊಸ ಸೌಲಭ್ಯವನ್ನು ಸ್ಥಾಪಿಸಲು ಈ ಹೂಡಿಕೆ ಮಾಡಲಾಗುತ್ತಿದೆ. ಅಲ್ಲದೇ ಇವಿ ವಲಯದಲ್ಲಿ ಬೇಡಿಕೆಯನ್ನು ಪೂರೈಸಲು ಕಂಪನಿಯು ತನ್ನ ಆರ್ & ಡಿ (ಸಂಶೋಧನೆ ಮತ್ತು ಅಭಿವೃದ್ಧಿ) ಸಾಮರ್ಥ್ಯಗಳನ್ನು ಹೆಚ್ಚಿಸಲು ಯೋಜಿಸುತ್ತಿದೆ.

ಹೀರೋ ಮೋಟಾರ್ಸ್ ಎಲೆಕ್ಟ್ರಿಕ್ ವಾಹನಗಳಿಗೆ ಸುಧಾರಿತ ಆಟೋಮೋಟಿವ್ ತಂತ್ರಜ್ಞಾನದ ಭಾಗಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಿದೆ. ಕಂಪನಿಯು BMW, McLaren ಮತ್ತು AMG ನಂತಹ ಪ್ರಮುಖ ವಾಹನ ತಯಾರಕರಿಗೆ ಗೇರ್‌ಬಾಕ್ಸ್‌ಗಳನ್ನು ಪೂರೈಸಲು ಪ್ರಾರಂಭಿಸಿದೆ.

ಕಂಪನಿಯು EV ಘಟಕಗಳಿಗೆ, ವಿಶೇಷವಾಗಿ ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೆರಿಕಾದಿಂದ ಬೇಡಿಕೆ ಪಡೆಯಲು ಬಯಸುತ್ತಿದೆ. ಹೀಗಾಗಿ ಕಂಪನಿಯು ಎಲೆಕ್ಟ್ರಿಕ್ ಬಿಡಿಭಾಗಗಳ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!