Wednesday, November 30, 2022

Latest Posts

ಗುಜರಾತ್‌ನಲ್ಲಿ ಪಾಕಿಸ್ತಾನದ ಬೋಟ್‌ ಹಾಗೂ 360 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ಗುಜರಾತ್ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳದ ಜಂಟಿ ಕಾರ್ಯಾಚರಣೆಯಲ್ಲಿ 350 ಕೋಟಿ ರೂ. ಮೌಲ್ಯದ 50 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಶನಿವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದರು. ಹೆಚ್ಚಿನ ತನಿಖೆಗಾಗಿ ಹಡಗು ಮತ್ತು ಆರು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಶುಕ್ರವಾರ ರಾತ್ರಿ, ಕೋಸ್ಟ್ ಗಾರ್ಡ್ ಸಿ-429 ಮತ್ತು ಸಿ-454 ಎಂಬ ಎರಡು ಪ್ರತಿಬಂಧಕ ಹಡಗುಗಳಲ್ಲಿ ಅಂತರರಾಷ್ಟ್ರೀಯ ಸಮುದ್ರ ಗಡಿಯಲ್ಲಿ ಗಸ್ತು ತಿರುಗುತ್ತಿತ್ತು. ಗುಜರಾತಿನ ಜಖೌನಿಂದ 40 ನಾಟಿಕಲ್ ಮೈಲುಗಳಷ್ಟು,  ಭಾರತೀಯ ಭೂಪ್ರದೇಶದಿಂದ ಐದು ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಅನುಮಾನಾಸ್ಪದವಾಗಿ ಹಡಗು ಚಲಿಸುತ್ತಿರುವುದು ಕಂಡುಬಂದಿದೆ. ಹಡಗನ್ನು ತಡೆಯುವ ವೇಳೆ ಪಾಕಿಸ್ತಾನಿ  ಸಿಬ್ಬಂದಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಎಂದು ಅಧಿಕಾರಿಗಳು ತಿಳಿಸಿದರು. ಈ ವೇಳೆ ಕರಾವಳಿ ರಕ್ಷಣಾ ಹಡಗುಗಳು ಪಾಕಿಸ್ತಾನದ ಹಡಗನ್ನು ಸುತ್ತುವರೆದು ಬಲವಂತವಾಗಿ ನಿಲ್ಲಿಸಿದ್ದಾಗಿ ತಿಳಿದುಬಂದಿದೆ.

ಹಡಗಿನಲ್ಲಿ ಐದು ಗೋಣಿ ಚೀಲಗಳಲ್ಲಿ ಅಡಗಿಸಿಟ್ಟಿದ್ದ 50 ಕೆಜಿ ಮಾದಕ ವಸ್ತು ಹೆರಾಯಿನ್ ಎಂದು ಅಧಿಕಾರಿಗಳು ಗುರುತಿಸಿ, ವಶಪಡಿಸಿಕೊಂಡರು. ಮಾದಕ ವಸ್ತುಗಳ ಮಾರುಕಟ್ಟೆ ಮೌಲ್ಯ ಬರೋಬ್ಬರಿ 350 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಜರಾತಿನಲ್ಲಿ ಭಾರತೀಯ ಕೋಸ್ಟ್ ಗಾರ್ಡ್, ಎಟಿಎಸ್ ನಡೆಸಿದ ಆರನೇ ಜಂಟಿ ದಾಳಿ ಇದಾಗಿದೆ. ಒಂದು ತಿಂಗಳ ಅವಧಿಯಲ್ಲಿ ಇದು ಎರಡನೇ ಕಾರ್ಯಾಚರಣೆ. ಸೆಪ್ಟೆಂಬರ್ 14 ರಂದು ಪಾಕಿಸ್ತಾನದ ದೋಣಿಯಿಂದ 40 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!