ರಷ್ಯಾ-ಕ್ರಿಮಿಯಾ ಸಂಪರ್ಕ ಸೇತುವೆ ಬ್ಲಾಸ್ಟ್: ಭಯಾನಕವಾಗಿದೆ ತೈಲ ಟ್ಯಾಂಕರ್‌ ಉರಿಯುತ್ತಿರುವ ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾದಿಂದ ಕ್ರಿಮಿಯಾಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಪೂರ್ವ ಉಕ್ರೇನಿಯನ್ ನಗರ ಖಾರ್ಕಿವ್‌ನಲ್ಲಿ ಪ್ರಬಲ ಸ್ಫೋಟದ ಬಳಿಕ ರಷ್ಯಾದಲ್ಲಿ ವಿಲೀನವಾದ ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆಯ ಮೇಲೆ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮವಾಗಿ ಭಾರಿ ಬೆಂಕಿ ಕಾಣಿಸಿಕೊಂಡು ಸೇತುವೆಯ ಕುಸಿದಿರುವುದಾಗಿ ರಷ್ಯಾದ ಅಧಿಕಾರಿಗಳು ಶನಿವಾರ ಸ್ಪಷ್ಟಪಡಿಸಿದರು.

ಬೆಳಗ್ಗೆ 6.07ಕ್ಕೆ ಈ ಘಟನೆ ನಡೆದಿದೆ. ಕಾರ್ ಬಾಂಬ್ ಸ್ಫೋಟದಿಂದ ರೈಲಿನಲ್ಲಿ ಸಾಗಿಸುತ್ತಿದ್ದ ಏಳು ಇಂಧನ ಟ್ಯಾಂಕ್‌ಗಳು ಬೆಂಕಿಯಿಂದ ಧಗಧಗನೆ ಹೊತ್ತಿ ಉರಿದಿವೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಸೇತುವೆಯ ಎರಡು ಭಾಗಗಳು ಭಾಗಶಃ ಕುಸಿದಿವೆ ಎಂದು ರಷ್ಯಾದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಮಿತಿ ತಿಳಿಸಿದೆ.

ಈ ಘಟನೆಯ ನಂತರ ಸೇತುವೆಯ ಮೇಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸೇತುವೆ ಕುಸಿದಿದ್ದು, ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ರೈಲಿನ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಈ ಸೇತುವೆಯನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆದೇಶದ ಮೇರೆಗೆ ನಿರ್ಮಿಸಿ, 2018 ರಲ್ಲಿ ಉದ್ಘಾಟಿಸಲಾಯಿತು. ಸೇತುವೆಯು ರಷ್ಯಾ ಹಾಗೂ ಉಕ್ರೇನ್‌ನ ಕ್ರಿಮಿಯಾವನ್ನು ಸಂಪರ್ಕಿಸುತ್ತದೆ. ಸದ್ಯ ಉಕ್ರೇನ್‌ನ ಮೇಲೆ ರಷ್ಯಾದ ಯುದ್ಧ ನಡೆಸುತ್ತಿದ್ದು, ಈ ಈ ಸೇತುವೆ ದಕ್ಷಿಣ ಭಾಗದಲ್ಲಿ ಹೋರಾಡುತ್ತಿರುವ ರಷ್ಯಾದ ಸೈನಿಕರಿಗೆ ಮಿಲಿಟರಿ ಉಪಕರಣಗಳು ಮತ್ತು ಸೈನ್ಯವನ್ನು ಸಾಗಿಸಲು ಪ್ರಮುಖ ಸಾರಿಗೆ ಕೇಂದ್ರವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!