ಸುದ್ದಿ ಪ್ರಸಾರಕ್ಕೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ನಟಿ ತಮನ್ನಾ ಬೌನ್ಸರ್‌ಗಳಿಂದ ಹಲ್ಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮನ್ನಾ ಸೌತ್‌ನ ಟಾಪ್ ಹೀರೋಯಿನ್ ಎಂದು ಗುರುತಿಸಿಕೊಂಡಿರುವ ನಟಿ. ಸದ್ಯ ಆಕೆ ಅಭಿನಯದ ‘ಬಬ್ಲಿ ಬೌನ್ಸರ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಬಾಲಿವುಡ್ ಸ್ಟಾರ್ ನಿರ್ದೇಶಕ ಮಧುರ್ ಭಂಡಾರ್ಕರ್ ನಿರ್ದೇಶನದ ಈ ಚಿತ್ರ ನೇರವಾಗಿ OTT ನಲ್ಲಿ ಬಿಡುಗಡೆಯಾಗಲಿದೆ. ಚಿತ್ರವು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಸೆಪ್ಟೆಂಬರ್ 23 ರಿಂದ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ.

ಈ ಹಿನ್ನೆಲೆಯಲ್ಲಿ ಚಿತ್ರತಂಡ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಪತ್ರಿಕಾಗೋಷ್ಠಿ ನಡೆಸಿತು. ಈ ಪತ್ರಿಕಾಗೋಷ್ಠಿಯ ನಂತರ, ತಮನ್ನಾ ಅವರ ಬೌನ್ಸರ್‌ಗಳು ತೆಲುಗು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಸಂವಾದದ ನಂತರ, ಮಾಧ್ಯಮ ಪ್ರತಿನಿಧಿಗಳು ನಟಿ, ನಿರ್ದೇಶಕರ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರು.

ಈ ವೇಳೆ ತಮನ್ನಾ ಅವರ ಬೌನ್ಸರ್‌ಗಳು ಕೋಪದಿಂದ ಪತ್ರಕರ್ತರ ಮೇಲೆ ದಾಳಿ ಮಾಡಿದರು. ಈ ದಾಳಿಯಲ್ಲಿ ಇಬ್ಬರು ಕ್ಯಾಮರಾಮನ್‌ಗಳು ಗಾಯಗೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಮತ್ತೊಂದೆಡೆ, ಘಟನೆಗೆ ಪತ್ರಕರ್ತರ ಸಂಘಗಳು ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!