ಭಾರತ-ಪಾಕ್ ಗಡಿಯಲ್ಲಿ ಹೊಸ ಆತಂಕ: ಹೆಕ್ಸಾಕಾಪ್ಟರ್ ಡ್ರೋನ್ ನಲ್ಲಿ ಹಾರಿಬಂತು ಹೆರಾಯಿನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ಮೈದಾನದಲ್ಲಿ ಭದ್ರತಾ ಪಡೆಗಳು ಆಧುನಿಕ ತಂತ್ರಜ್ಞಾನವನ್ನು ಹೊಂದಿದ ಹೆಕ್ಸಾಕಾಪ್ಟರ್ ಡ್ರೋನ್ ಮತ್ತು 5 ಕೆಜಿ ತೂಕದ ಹೆರಾಯಿನ್ ಹೊಂದಿರುವ ಪ್ಯಾಕೆಟ್‌ಗಳನ್ನು ಪತ್ತೆಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್), ತರ್ನ್ ತರನ್ ಪೊಲೀಸರ ಜಂಟಿ ಶೋಧದಲ್ಲಿ ಹೆಕ್ಸಾಕಾಪ್ಟರ್ ಡ್ರೋನ್ ಪತ್ತೆಯಾಗಿದೆ.

ಈ ಕುರಿತು ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಟ್ವೀಟ್ ಮಾಡಿದ್ದು,  ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಹೊಸ ಬೆಳವಣಿಗೆಯಲ್ಲಿ ಡ್ರೋನ್‌ಗಳನ್ನು ಕಂಡುಹಿಡಿದು ಅವುಗಳನ್ನು ಹೊಡೆದುರುಳಿಸಲು ಗಿಡುಗ ಹಾಗೂ ಹದ್ದುಗಳಿಗೆ ಭಾರತೀಯ ಸೇನೆ ಟ್ರೈನಿಂಗ್‌ ಕೊಡುತ್ತಿದೆ. ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ (ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ) ಕೆಲವು ಆಂಟಿ-ಡ್ರೋನ್ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ ಎಂದು ಬಿಎಸ್ಎಫ್ ಡಿಜಿ ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!