ಸ್ವಿಗ್ಗಿ ಕೊಟ್ಟಿದೆ ರಿಪೋರ್ಟ್: ಈ ವರ್ಷ ಅತೀ ಹೆಚ್ಚು ಆರ್ಡರ್ ಮಾಡಿದ ಫುಡ್ ಯಾವುದು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ತಾನು 2023ರಲ್ಲಿ ತಾನು ವಿತರಿಸಿದ ಆಹಾರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅತೀ ಹೆಚ್ಚು ಆರ್ಡರ್‌ಗಳ ಪೈಕಿ ಸತತ ಎಂಟನೇ ವರ್ಷವೂ ಬಿರಿಯಾನಿಯೇ ತನ್ನಸ್ಥಾನ ಕಾಯ್ದುಕೊಂಡಿದೆ!
ಅಂಕಿ ಅಂಶಗಳ ಪ್ರಕಾರ 2023ರಲ್ಲಿ ಭಾರತೀಯರು ಪ್ರತಿ ಸೆಕೆಂಡಿಗೆ 2-5 ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಇನ್ನು ಅತೀ ಹೆಚ್ಚು ಆರ್ಡರ್ ಮಾಡಿರುವುದು ಚಿಕನ್ ಬಿರಿಯಾನಿಯಾಗಿದೆ. ಪ್ರತಿ 5.5 ಚಿಕನ್ ಬಿರಿಯಾನಿಗೆ 1 ವೆಜ್ ಬಿರಿಯಾನಿ ಆರ್ಡರ್ ಆಗಿದೆ. 2023ರ ಜನವರಿ 1ರಂದು ಭಾರತೀಯರು ಒಟ್ಟು 4,30,000 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ ಎಂದು ಅಂಕಿಅಂಶಗಳು ಹೇಳಿವೆ.
ನ.19ರಂದು ನಡೆದ ವಿಶ್ವಕಪ್ ಫೈನಲ್ ಸಂದರ್ಭ ಭಾರತದಿಂದ ಪ್ರತಿ ನಿಮಿಷಕ್ಕೆ 188 ಪಿಜ್ಜಾಗಳನ್ನು ಆರ್ಡರ್ ಮಾಡಲಾಗಿದೆ. ಚೆನ್ನೈ, ದೆಹಲಿ ಮತ್ತು ಹೈದರಾಬಾದ್‌ನ ಬಳಕೆದಾರರ ಖಾತೆಗಳಿಂದ ಅತಿ ಹೆಚ್ಚು ಆರ್ಡರ್‌ಗಳು ಬಂದಿದ್ದು, ಪ್ರತಿಯೊಂದರಿಂದಲೂ ತಲಾ 10,000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಬಂದಿದೆ. ಎಂದು ವರದಿ ಹೇಳುತ್ತದೆ. ಮುಂಬೈನ ಗ್ರಾಹಕರು 42.3 ಲಕ್ಷ ರೂಪಾಯಿ ಮೌಲ್ಯದ ಆಹಾರವನ್ನು ಆರ್ಡರ್ ಮಾಡಿದ್ದಾರೆ ಎಂದು ವರದಿಯ ಅಂಕಿಅಂಶ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!