Saturday, August 13, 2022

Latest Posts

ಹಿಜಾಬ್ ವಿವಾದ: ಉದ್ದೇಶ ಪೂರ್ವಕವಾಗಿ ಮಾಡಲಾಗುತ್ತಿದೆ ಎಂದ ಯತ್ನಾಳ್

ಹೊಸದಿಗಂತ ವರದಿ,ವಿಜಯಪುರ:

ಹಿಜಾಬ್ ವಿವಾದ ಉದ್ದೇಶ ಪೂರ್ವಕವಾಗಿ ಮಾಡಲಾಗುತ್ತಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ದೂರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಶಾಂತಿ ಹಾಳು ಮಾಡಲು ಹಿಜಾಬ್ ವಿವಾದ ಮಾಡಲಾಗುತ್ತಿದೆ. ತುಕುಡೆ ತುಕುಡೆ ಗ್ಯಾಂಗ್ ಕಾಂಗ್ರೆಸ್‌ನ ವ್ಯವಸ್ಥಿತ ಹುನ್ನಾರ ಇದು ಎಂದು ಆರೋಪಿಸಿದರು.
ದೇಶದಲ್ಲಿ ಅಸ್ಥಿರತೆ ತರಲು ನಡೆದ ಪ್ರಕ್ರಿಯೆ ಇದಾಗಿದ್ದು, ಕಾಂಗ್ರೆಸ್ ನ ಷಡ್ಯಂತ್ರ ಎಂದರು.
ಹಿಜಾಬ್ ಹಾಕಲೇಬೇಕು ಅನ್ನೋದರ ಹಿಂದೆ ಕಾಂಗ್ರೆಸ್‌ನ ಶಕ್ತಿ ಇದೆ. ದೇಶ ವಿರೋಧಿ ಸಂಘಟನೆಗಳ ಬೆಂಬಲ ಇದೆ ಎಂದು ದೂರಿದರು.
ಹೈದ್ರಾಬಾದ್ ನ ತಂಡ ಬಂದು ಉಡುಪಿಯಲ್ಲಿ ಸಭೆ ನಡೆಸಿ ಹಿಜಾಬ್ ಗೆ ಬೆಂಬಲಿಸಿದೆ. ರೈತರ ಹೋರಾಟ, ಸಿಎಎ ಹೋರಾಟದಲ್ಲಿಯು ಇದೆ ರೀತಿ ನಡೆದಿತ್ತು ಎಂದರು.
ದೇಶದಲ್ಲಿ‌ ಒಂದೇ ಪಕ್ಷಕ್ಕೆ ಅಧಿಕಾರ ಕೊಟ್ಟಿರೋದಕ್ಕೆ ಹೀಗೆಲ್ಲಾ ಮಾಡ್ತಿದ್ದಾರೆ. ಮೋದಿ ಆಡಳಿತ ನೋಡಲಾಗದೆ ಉದ್ದೇಶಪೂರ್ವಕವಾಗಿ ವಿರೋಧ ಪಕ್ಷಗಳು ಹೀಗೆಲ್ಲ ಮಾಡುತ್ತಿವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss