ಹಿಂದಿ ಭಾಷೆ ಕೆಲಸಕ್ಕೆ ಬರುವುದಿಲ್ಲ, ಇಂಗ್ಲಿಷ್ ಕಲಿಯಿರಿ: ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ್ ಜೋಡೋ ಯಾತ್ರೆ ಶುರುವಾದಲ್ಲಿಂದ ರಾಹುಲ್ ಗಾಂಧಿ ಒಂದು ಒಂದು ಹೇಳಿಕೆಯನ್ನು ನೀಡುತ್ತಿದ್ದು,ಎಲ್ಲೆಡೆ ಆಕ್ರೋಶ, ಟೀಕೆಗಳು ವ್ಯಕ್ತವಾಗುತ್ತಿದೆ.

ಇದೀಗ ಯಾತ್ರೆ ರಾಜಸ್ತಾನ ತಲುಪಿದ್ದು, ಈ ವೇಳೆ ರಾಹುಲ್ ಗಾಂಧಿ ಅವರು, ಹಿಂದಿ ಭಾಷೆ ಬಳಕೆ ಸಂಬಂಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ಜಗತ್ತಿನ ಇತರ ಭಾಗದ ಜನರೊಂದಿಗೆ ನೀವು ಮಾತನಾಡಬೇಕಿದ್ದರೆ ಕೇವಲ ಹಿಂದಿ ಗೊತ್ತಿದ್ದರೆ ಸಾಲದು, ಇಂಗ್ಲಿಷ್ ಕೂಡ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಜಗತ್ತಿನ ಇತರ ಭಾಗಗಳ ಜನರೊಂದಿಗೆ ಮಾತನಾಡಬೇಕಿದ್ದರೆ ಹಿಂದಿ ಕೆಲಸಕ್ಕೆ ಬರುವುದಿಲ್ಲ, ಆಗ ಇಂಗ್ಲಿಷ್ ಬೇಕಾಗುತ್ತದೆ. ಹಾಗಾಗಿ, ನಮ್ಮ ಬಡ ಕೃಷಿಕರು, ಕಾರ್ಮಿಕರ ಮಕ್ಕಳು ಓದಿ, ಅಮೆರಿಕನ್ನರೊಂದಿಗೆ ಸ್ಪರ್ಧಿಸಿ ಗೆಲ್ಲಬೇಕು. ಅವರು ಅಮೆರಿಕ ಬಳಸುವ ಭಾಷೆಯನ್ನು ಬಳಸಿಕೊಂಡು ಅವರ ವಿರುದ್ಧವೇ ಗೆಲ್ಲಬೇಕು. ಇದಕ್ಕೆ ಪೂರಕವಾಗಿ ರಾಜಸ್ಥಾನದಲ್ಲಿ 1,700 ಇಂಗ್ಲಿಷ್ ಶಾಲೆಗಳನ್ನು ತೆರೆದಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ನಾಯಕರಿಗೆ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಸುವುದು ಬೇಕಾಗಿಲ್ಲ. ಆದರೆ, ಬಿಜೆಪಿಯ ನಾಯಕರು ಮಾತ್ರ ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಮ್ಮು ಸ್ಕೂಲಿಗೆ ಕಳುಹಿಸುತ್ತಾರೆ. ವಾಸ್ತವದಲ್ಲಿ ಅವರಿಗೆ ನಮ್ಮ ಬಡ ಕೃಷಿಕರು, ಕಾರ್ಮಿಕರ ಮಕ್ಕಳು ಇಂಗ್ಲಿಷ್ ಕಲಿಯುವುದು ಬೇಕಾಗಿಲ್ಲ. ಹಾಗಾಗಿ, ದೊಡ್ಡದಾಗಿ ಕನಸು ಕಾಣಿ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!