ಬಾಂಗ್ಲಾದಲ್ಲಿ ಹಿಂದು ದೇವಾಲಯದ ಮೇಲೆ ಕಿರಾತಕನ ಕೆಂಗಣ್ಣು: ಆರೋಪಿ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದ ನಂತರ ಇದೀಗ ಬಾಂಗ್ಲಾದೇಶದ ಹಿಂದು ದೇವಾಲಯದ ಧ್ವಂಸ ಮಾಡಿರುವ ಘಟನೆ ಮುನ್ನೆಲೆಗೆ ಬಂದಿದೆ. ಬ್ರಾಹ್ಮಣ ಬಾರಿಯಾ ಜಿಲ್ಲೆಯಲ್ಲಿ 36 ವರ್ಷದ ಅವಿವೇಕಿಯೊಬ್ಬ ಹಿಂದು ದೇವಾಲಯವನ್ನು ಹಾನಿ ಮಾಡಿದ್ದಾನೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಿಯಾಮತ್‌ಪುರ ಗ್ರಾಮದಲ್ಲಿರುವ ದುರ್ಗಾ ಮಾತೆಯ ದೇವಸ್ಥಾನ ಹಾನಿಗೊಳಗಾಗಿದ್ದು, ಆರೋಪಿಯನ್ನು ಖಲೀಲ್ ಮಿಯಾ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಲಾಯಿತು. ದೇಗುಲಗಳು ಧ್ವಂಸವಾಗಿರುವ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಕೋಲಾಹಲ ಉಂಟಾಯಿತು. ಸ್ಥಳೀಯರ ನೆರವಿನಿಂದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದರು.

ಬ್ರಾಹ್ಮಣಬಾರಿಯಾ  ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್… ಶಖಾವತ್ ಹುಸೇನ್ ಖಲೀಲ್ ಮಿಯಾ ಬಂಧನವನ್ನು ದೃಢಪಡಿಸಿದರು. ಆರೋಪಿ ಯಾಕೆ ಈ ಕೃತ್ಯ ಮಾಡಿದ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ. ನಿಯಾಮತಪುರ ಸರ್ವಜನನ ದುರ್ಗಾ ಮಂದಿರ  ಹಠಾತ್ ವಿಧ್ವಂಸಕ ಕೃತ್ಯವು ಸ್ಥಳೀಯ ಹಿಂದು ಸಮುದಾಯದ ಜನರಲ್ಲಿ ಕೋಪ ಮತ್ತು ಅಸಮಾಧಾನವನ್ನು ಹುಟ್ಟುಹಾಕಿತು. ಆರೋಪಿ ಖಲೀಲ್ ಮಿಯಾ ನಿಯಾಮತ್‌ಪುರ ಗ್ರಾಮದಲ್ಲಿರುವ ತನ್ನ ಸಹೋದರಿಯ ಮನೆಗೆ ಭೇಟಿಯಾಗಲು ಬಂದಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿ ದುರ್ಗಾ ದೇವಸ್ಥಾನದಲ್ಲಿದ್ದ ಐದರಿಂದ ಆರು ವಿಗ್ರಹಗಳನ್ನು ಒಡೆದಿದ್ದಾರೆ.

ಈ ಪ್ರಕರಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಆತನ ವಿರುದ್ಧ ತ್ವರಿತ ವಿಚಾರಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!