ನಿಮ್ಮೆಲ್ಲರನ್ನು ರಂಜಿಸಲು ಕಿರುತೆರೆಗೆ ಬರಲಿದೆ ʼರಾಘವೇಂದ್ರ ಸ್ಟೋರ್ಸ್‌ʼ ಸಿನಿಮಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈ ವಾರಾಂತ್ಯದಲ್ಲಿ ನಿಮ್ಮನ್ನು ರಂಜಿಸಲು ಕಿರುತೆರೆಗೆ ಬರಲು ಸಜ್ಜಾಗಿದೆ ನವರಸ ನಾಯಕ ಜಗ್ಗೇಶ್‌ ಅಭಿನಯದ ʼರಾಘವೇಂದ್ರ ಸ್ಟೋರ್ಸ್‌ʼ ಸಿನಿಮಾ.

ನವರಸ ನಾಯಕ ಜಗ್ಗೇಶ್‌ ಅಭಿನಯದ ಹಾಗೂ ಹೊಂಬಾಳೆ ಸಂಸ್ಥೆ ನಿರ್ಮಾಣದ ʻರಾಘವೇಂದ್ರ ಸ್ಟೋರ್ಸ್‌ʼ ಸಿನಿಮಾ ಒಟಿಟಿಗೆ ಈಗಾಗಲೇ ಬಂದಿದೆ. ಇದೀಗ ಈ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ.

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ನಾಳೆ (ಜುಲೈ 23) ಸಂಜೆ 6.30ಕ್ಕೆ ʻರಾಘವೇಂದ್ರ ಸ್ಟೋರ್ಸ್’ ಪ್ರಸಾರ ಆಗಲಿದೆ.

ಹಾಸ್ಯಭರಿತವಾಗಿರುವ ಈ ಸಿನಿಮಾ‌ ವಾರಾಂತ್ಯದ ಸಿನಿಮಾ ವೀಕ್ಷಕರಿಗೆ ಹೆಚ್ಚು ಮನರಂಜನೆ ನೀಡಲಿದೆ. ನಟ ಜಗ್ಗೇಶ್ ಅಭಿನಯಕ್ಕೆ ಸಿನಿರಸಿಕರು ನಕ್ಕು ಖುಷಿಪಡಲಿದ್ದಾರೆ.

ಈ ಚಲನಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರವಿಶಂಕರ್‌ ಗೌಡ ಮತ್ತು ನಟಿ ಶ್ವೇತಾ ಶ್ರೀವಾಸ್ತವ್‌ ಅಭಿನಯಿಸಿದ್ದಾರೆ. ಚಲನಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!